ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇ.ಆರ್.ಡಬ್ಲ್ಯೂ.ಸಿ ಯೋಜನೆಯಡಿಯಲ್ಲಿ ಮಹಿಳಾ ದೌರ್ಜನ್ಯದ ವಿರುದ್ದ ಧನಿ ಎತ್ತಿದ ಸದಸ್ಯರ ಕೂಟ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಭಾ ಶೆಟ್ಟಿ ಪ್ರೇರಣಾ ಮಹಿಳಾ ಸ್ವಸಹಾಯ ಸಂಘ ಇವರು ವಹಿಸಿದ್ದರು ಮತ್ತು ಸ್ವಾವಲಂಬನೆಯ ಹಾಗೂ ಸ್ವಾಭಿಮಾನ ನಮ್ಮ ಹಕ್ಕು ಎಂದು ಹೇಳಿದರು. ತಮ್ಮ ಜೀವನದ ಸಾಧನೆಗಳನ್ನು ವ್ಯಕ್ತಪಡಿಸುವ ಮೂಲಕ ಮಹಿಳೆಯರಿಗೆ ಉತ್ತೇಜನ ತುಂಬಿದರು.
9vp mahila davurjanya-ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಒಂಬೂಡ್ಸ್‍ಮಾನ್ ಮಹಾತ್ಮಗಾಂಧಿ ನ.ರೇ.ಗಾ.ಗೋಜನೆ ಶೀನ ಶೆಟ್ಟಿ ಮಾತನಾಡಿ ಮಹಿಳೆಯರು ಬದಲಾಗಬೇಕು ಮತ್ತು ಮಹಿಳಾ ಶಕ್ತಿಗಳ ಬಗ್ಗೆ ಮನಮಟ್ಟುವಂತೆ ಹುಮ್ಮಸ್ಸು ನೀಡಿದರು.
ಕೂಟದ ಕೊನೆಯಲ್ಲಿ ಪಪ್ರಮಾಣವಚನವನ್ನು ಶೀನ ಶೆಟ್ಟಿಯವರು ಭೋಧಿಸಿದರು.
“ಪ್ರೇರಣಾ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರಾದ ನಾವು ಒಕ್ಕೂಟದ ಉದ್ದೇಶ ಮತ್ತು ನಿಯಮಗಳಗೆ ಬದ್ಧರಾಗಿರುತ್ತೇವೆ. ನಾವು ಒಕ್ಕೂಟದ ಶಕ್ತಿ ಮತ್ತು ಬೆನ್ನೆಲುಬಾಗಿ ಒಕ್ಕೂಟವನ್ನು ಬಲಗೊಳಿಸುತ್ತೇವೆ. ಆ ಮೂಲಕ ನಮ್ಮ ವೈಯಕ್ತಿಕ, ಕೌಟುಂಬಿಕ ಹಾಗೂ ಸಮುದಾಯದ ಸಮಸ್ಯೆಗಳಿಗೆ ನಾವೇ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ. ಸ್ವಶಕ್ತಿ ಮತ್ತು ಸಂಘ ಶಕ್ತಿಯಿಂದ ಸ್ವಯಂ ಅಭಿವೃದ್ದಿಗೆ ಸಾಮೂಹಿಕವಾಗಿ ಶ್ರಮಿಸುತ್ತೇವೆ ಎಂದು ಆತ್ಮ ಸಾಕ್ಷಿಯಾಗಿ ಈ ಮೂಲಕ ಪ್ರಮಾಣ ಮಾಡುತ್ತೇವೆ”
ಕಾರ್ಯಕ್ರಮದ ನಿರೂಪಣೆಯನ್ನು ಯೋಜನಾ ಸಂಯೋಜಕರಾದ ವಿಲಿಯ ಸ್ಯಾಮುವೆಲ್ ನೆರವೇರಿಸಿದರು ಹಾಗೂ ಪ್ಲೇವಿ, ಒಕ್ಕೂಟದ ಸದಸ್ಯರು ಧನ್ಯವಾದ ಸಮರ್ಪಿಸಿದರು.

By suddi9

Leave a Reply

Your email address will not be published. Required fields are marked *