ಬಂಟ್ವಾಳ: ರಾಜ್ಯ ಸರಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಿಸುವಂತೆ ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘ(ರಿ.)ಕರ್ನಾಟಕ ರಾಜ್ಯ ಆಶ್ರಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ಸುತ್ತಿದ ಸಂದೇಶ ರಥಯಾತ್ರೆಯು ಡಿ. 1ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಮಂದಿರಕ್ಕೆ ಆಗಮಿಸಿತು.
0112bteph5ಇದೇ ಸಂದರ್ಭ ಸ್ವಾಗತ ನಡೆಸಿದ ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಿ “ಸಂದೇಶ ರಥಯಾತ್ರೆಯು ನ.12ರಂದು ಬೀದರ ಜಿಲ್ಲೆಯಲ್ಲಿ ಪ್ರಾರಂಭಗೊಂಡು ಡಿ.12ರಂದು ಬೆಂಗಳೂರಿನಲ್ಲಿ ಮಹಾಸಮ್ಮೇಳನ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸಂದೇಶ ಯಾತ್ರೆಯ ಮೂಲಕ ಜಿಲ್ಲೆಯ ವಿವಿಧ ಭಾಗಗಳ ಜನರಿಗೆ ಗುರು ಸಂದೇಶವನ್ನು ಮುಟ್ಟಿಸುವ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದರು.
ಬಿಎಸ್‍ಎನ್‍ಡಿಪಿ ರಾಜ್ಯ ಅಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್, ಪ್ರ.ಕಾರ್ಯದರ್ಶಿ ಎಲ್. ಕಾಂತರಾಜು ವಿವಿಧ ಮಾಹಿತಿ ನೀಡಿದರು.
ರಾಘವ ಅಮೀನ್, ಕೆ. ಸಂಜೀವ ಪೂಜಾರಿ, ವಿಶ್ವನಾಥ ಗಣೇಶ್ ಟಯರ್, ಮಹಾಬಲ ಬಂಗೇರ, ಸಂಜೀವ ಪೂಜಾರಿ ಗುರುಕೃಪ, ರಾಜೇಶ್ ಸುವರ್ಣ ರಾಜಲಕ್ಷಿ, ಶಂಕರ್ ಕಾಯೆರ್‍ಮಾರ್, ಉಮೇಶ್ ಸುವರ್ಣ ತುಂಬೆ, ಮೋನಪ್ಪ ಮಜಿ, ಸುರೇಂದ್ರ ಅಮೀನ್ ಬೋಳಂತೂರು, ರಾಜೇಶ್ ಸುವರ್ಣ ಯುವವಾಹಿನಿ, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ ಮತ್ತು ಇತರ ಸದಸ್ಯರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *