ಬಂಟ್ವಾಳ: ವಿಠಲ ವಿದ್ಯಾ ಸಂಘ ವಿಟ್ಲ ಇದರ ವಿಠಲ ಪ್ರೌಢ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಅಧ್ಯಕ್ಷತೆಯನ್ನು ವಹಿಸಿದ ಇದೇ ಸಂಸ್ಥೆಯ ಹಳೆ ವಿದ್ಯಾರ್ಥಿನಿ ಸವಿತಾ ಎಸ್ ಭಟ್ ಅಡ್ವಾಯಿ ವಿದ್ಯಾರ್ಥಿಗಳೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.
ವಿಠಲ ಪ್ರೌಢ ಶಾಲೆಯ ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಮತ್ತು ಮುಳಿಯ ಆಂಗ್ಲ ಮಾಧ್ಯಮ ಶಾಲೆಯ ವರದಿಯನ್ನು ಮುಖ್ಯೋಪಾಧ್ಯಾಯಿನಿ ಸೀತಾಲಕ್ಷ್ಮಿ ಸಭೆಯಲ್ಲಿ ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ವಿಠಲ ಪ್ರೌಢ ಶಾಲೆಯ ಮತ್ತು ಮುಳಿಯ ಪ್ರೌಢ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾವಾರು, ತರಗತಿವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು, ಸಾಹಿತ್ಯಿಕ ಬಹುಮಾನಗಳನ್ನು, ಆಟೋಟಗಳ ಪ್ರಶಸ್ತಿ ಪದಕಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡಿ ಪುರಸ್ಕರಿಸಲಾಯಿತು. ಮುಖ್ಯ ಅತಿಥಿಗಳಾಗಿ ವಿಠಲ ವಿದ್ಯಾ ಸಂಘದ ಗೌರವಾಧ್ಯಕ್ಷರಾದ ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು, ಅಧ್ಯಕ್ಷರಾದ ಮುಗುಳಿ ತಿರುಮಲೇಶ್ವರ ಭಟ್, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ವಿಠಲ ಸುಪ್ರಜಿತ್ ಐಟಿಐ ಪ್ರಾಂಶುಪಾಲ ರಘುರಾಮ ಶಾಸ್ತ್ರಿ ಭಾಗವಹಿಸಿದ್ದರು. ವಿದ್ಯಾಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲದ್ದರು. ಅಧ್ಯಾಪಕ ಮಹಬಲೇಶ್ವರ ಭಟ್ ಅತಿಥಿಗಳನ್ನು ಪರಿಚಯಿಸಿದರು. ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಜೋಯಲ್ ಪಿಂಟೊ ವಂದಿಸಿದರು. ವಿದ್ಯಾರ್ಥಿನಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯ ಮಾದಕಟ್ಟೆ ಈಶ್ವರ ಭಟ್ , ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಕ ಶಿ ವಿಶ್ವನಾಥ, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರು, ನಿವೃತ್ತ ಪ್ರಾಂಶುಪಾಲ ಅನಂತಕೃಷ್ಣ ಹೆಬ್ಬಾರ್, ಇತರ ಹಿರಿಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.
