ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಅಡಿಟೋರಿಯಂನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಸಿಪ್ನಲ್ಲಿ ಕರ್ನಾಟಕ ತಂಡವು ಒಟ್ಟು 280 ಅಂಕಗಳೊಂದಿಗೆ ಪ್ರಶಸ್ತಿಯನ್ನು ಪಡೆಯಿತು. ಆಂಧ್ರ ಪ್ರದೇಶ ತಂಡವು 94 ಅಂಕಗಳೊಂದಿಗೆ ದ್ವಿತೀಯ ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು.

1mood karate (2)
ಹುಡುಗರ ವಿಭಾಗದ 2015ರ ಗ್ರಾಂಡ್ ಚಾಂಪಿಯನ್ ಪ್ರಶಸ್ತಿಯನ್ನು ಉಜಿರೆಯ ಅಬ್ದುಲ್ ರೆಹಮಾನ್ ಹಾಗೂ ಹುಡುಗಿಯರ ವಿಭಾಗದಲ್ಲಿ ಮಮತಾ ಪಡೆದರು.
ಈ ಚಾಂಪಿಯನ್ ಸಿಪ್ನಲ್ಲಿ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಕೇರಳ, ಕರ್ನಾಟಕ ರಾಜ್ಯಗಳಿಂದ ಸುಮಾರು 2000 ಕ್ರೀಡಾಪಟುಗಳು ಭಾಗವಹಿಸಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ.ಚಂದ್ರಶೇಖರ ದೀಕ್ಷಿತ್ ವಹಿಸಿದ್ದರು. ಶೊರಿನ್ – ರಿಯೂ ಕರಾಟೆಯ ಮುಖ್ಯ ಶಿಕ್ಷಕ ಹಾಗೂ ಹಾಗೂ ಸಂಘಟನಾ ಸಮಿತಿಯ ಕಾರ್ಯದರ್ಶಿ  ನದೀಮ್, ಶೊರಿನ್ – ರಿಯೂ ಕರಾಟೆಯ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ, ಮಂಗಳೂರಿನ ವೆಸ್ಟರ್ನ್  ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ವಾಲ್ಟರ್ ಸ್ಟೀಫನ್ ಮೆಂಡಿಸ್, ಎಂ.ಎ.ಅನಂತರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಮೂಡುಬಿದಿರೆ ಪ.ಪೂ.ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ಮಹಾವೀರ ಕಾಲೇಜಿನ ದೈಹಿಕ ನಿರ್ದೇಶಕ ರಾಜ್ ಪ್ರಸಾದ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಬೆಂಗಳೂರಿನ ಸುನೀಲ್ ಕುಮಾರ್, ನಿತ್ಯಾನಂದ ಕೆಮ್ಮಣ್ಣು, ಸತೀಶ್ ಬೆಳ್ಮಣ್, ಹರೀಶ್ ಬೆಳ್ಮಣ್, ಚಂದ್ರಹಾಸ ಮೊರ್ಗನ್ ಭಾಗವಹಿಸಿದ್ದರು.
ಶೊರಿನ್-ರಿಯೂ ಕರಾಟೆ ಅಸೋಸಿಯೇಶನ್, ಶ್ರೀ ಮಹಾವೀರ ಕಾಲೇಜು ಮೂಡುಬಿದರೆ, ವೆಸ್ಟರ್ನ್  ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು ಹಾಗೂ ಎಂ.ಕೆ.ಅನಂತರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಸಹಯೋಗದೊಂದಿಗೆ ಚಾಂಪಿಯನ್ಶಿಪ್ ಆಯೋಜಿಸಲಾಗಿತ್ತು.

By suddi9

Leave a Reply

Your email address will not be published. Required fields are marked *