ಮೂಡುಬಿದಿರೆ: ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ ಶೇಡಿಗುರಿ ನಿವಾಸಿ ಮನೋಜ್(28) ಅವರು ಮನೆಯಿಂದ ನಾಪತ್ತೆಯಾಗಿರುವುದಾಗಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೋಜ್ ಅವರ ಪತ್ನಿ ನ25ರಿಂದ 28ರ ಅವಧಿಯಲ್ಲಿ ಬೆಂಗಳೂರಿಗೆ ಹೋಗಿದ್ದಾಗ ಪತಿ ಮನೆಯಿಂದ ಹೊರ ತೆರಳಿರುವುದಾಗಿ ಶಂಕಿಸಲಾಗಿದೆ.

ಕನ್ನಡ, ಹಿಂದಿ, ತಮಿಳು, ಮರಾಠಿ ಭಾಷೆ ಬಲ್ಲವರಾದ ಮನೋಜ್ ದಪ್ಪ ಶರೀರ, ಗೋಧಿ ಮೈಬಣ್ಣ, ಕುತ್ತಿಗೆಯ ಎಡಭಾಗದಲ್ಲಿ ಕಪ್ಪು ಮಚ್ಚೆ, ಎರಡು ಕಿವಿ ಚುಚ್ಚಿದ ತೂತು,ಎಡಕೈ ತಟ್ಟಿನಲ್ಲಿ ಬಿಸಿ ಎಣ್ಣೆ ಬಿದ್ದ ಕಲೆ ಇರುತ್ತದೆ.
