ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಕೃಷಿಸಿರಿ ಮಳಿಗೆಗಳಿಗೆ ನುಡಿಸಿರಿ ಸಮ್ಮೇಳನಾಧ್ಯಕ್ಷ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.


ಮೂಡುಬಿದರೆ ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸಮ್ಮೇಳನಾಧ್ಯಕ್ಷರಿಗೆ ಹಸಿರು ಶಾಲು ಹೊದಿಸಿ, ಗೌರವಿಸಿದರು. ತುಳು ಸಾಹಿತಿ ಉಗ್ಗಪ್ಪ ಪೂಜಾರಿ ಅವರು `ತುಲು ಸಬ್ದಾರ್ತೋ'( ತುಳು ಶಬ್ದಾರ್ಥ) ತಮ್ಮ ನೂತನ ಕೃತಿಯನ್ನು ಸಮ್ಮೇಳನಾಧ್ಯಕ್ಷರಿಗೆ ನೀಡಿದರು.
ತುಳು ಪಾರಂಪರಿಕ ವಸ್ತುಗಳ ಸಂಗ್ರಹವನ್ನು ವೀಕ್ಷಿಸಿದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ, ತುಳು ಭಾಷೆ, ಪರಂಪರೆ ಶ್ರೀಮಂತಿಕೆಯಿಂದ ಕೂಡಿರುವಂತದ್ದು, ತುಳುವಿನಲ್ಲಿ ಅಗಾಧವಾದ ಶಬ್ದಸಂಪತ್ತಿದೆ. ತುಳು ಸಾಹಿತಿಗಳಿಂದ ತುಳು ಭಾಷೆಯನ್ನು ಬೆಳೆಸುವ ಕಾರ್ಯವಾಗಬೇಕು ಎಂದರು.
ಮಂಗಳೂರು ಆಕಾಶವಾಣಿಯ ಸದಾನಂದ ಪೆರ್ಲ, ಮೂಡುಬಿದರೆ ವಲಯ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಸಂಪರ್ಕ ಕೇಂದ್ರ ಪದಾಧಿಕಾರಿಗಳು ಉಪಸ್ಥಿತರಿದ್ದರು.
