ಕೈಕಂಬ:ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ) ಕ್ಷೀರ ಸಂಜೀವಿನಿ ಹಂತ -1ರ ಯೋಜನೆಯಡಿಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ(ನಿ) ಮಂಗಳೂರು ಹಾಗೂ ಕುಕ್ಕುದಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿ. ಇವರ ಸಂಯುಕ್ತ ಆಶ್ರಯದಲ್ಲಿ ಕ್ಷೀರ ಸಂಜೀವಿನಿ ಯೋಜನೆಯಡಿ ಸಂಘದ ಸದಸ್ಯರಿಗೆ ಆರೋಗ್ಯ ಮಾಹಿತಿ ಮತ್ತು ರಕ್ತ ವರ್ಗೀಕರಣ ಶಿಬಿರ ನ.28 ಶನಿವಾರ ಡೈರಿ ಆವರಣ ಕುಕ್ಕುದಕಟ್ಟೆಯಲ್ಲಿ ನಡೆಯಿತು.
1

DSC_0106

DSC_0108

DSC_0109

DSC_0110

DSC_0111ಶಿಫಾ ಲ್ಯಾಬ್ ಕೈಕಂಬ ಇದರ ವಿಜಯ ಶ್ರೀಧರ್ ಇವರು ರಕ್ತ ವರ್ಗೀಕರಣ ಮತ್ತು ಆರೋಗ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಕ್ಕುದಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರು ಸುಜಾತ, ದ.ಕ.ಹಾ.ಒ. ಮಂಗಳೂರು ಇದರ ಎಸ್.ಟಿ.ಈ.ಪಿ ಸಹಾಯಕಿ ನಳಿನಿ ನಾಯ್ಕ್, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *