ಕೈಕಂಬ: ಅಡ್ಡೂರು ಪೊನ್ನಂಗಿಲ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ನ. 28ರಂದು ಶನಿವಾರ ಮಣಿಕಂಠ ಭಜನಾ ಮಂಡಳಿ ಯವರಿಂದ ಭಜನಾ ಸಂಕೀರ್ತನೆ ನಡೆಯಿತು.
ಮಾತನಾಡಿಸಿದರೆ ಮಾತನಾಡುವ ದೇವರು ಎಂದೇ ಪ್ರಖ್ಯಾತಿ ಪಡೆದ ನಂಬಿದವರನ್ನು ಯಾವತ್ತು ಕೈಬಿಡದ ಅಡ್ಡೂರು ಪೊನ್ನಂಗಿಲ ಶ್ರೀ ಮುಖ್ಯ ಪ್ರಾಣನ ಸನ್ನಿಧಿಯಲ್ಲಿ ನಿರಂತರ ಪೂಜೆ ಪುರಸ್ಕಾರಗಳು ನಡೆಯುತ್ತಿದೆ. ಇತ್ತಿಚೇಗೆ ಮುಖ್ಯಸ್ತರು ಹಾಗೂ ಊರವರು ಸೇರಿ ವಾರಕ್ಕೊಮ್ಮೆ ಭಜನೆಯನ್ನು ಮಾಡುವುದೆಂದು ತೀರ್ಮಾನಿಸಿ ಆಸುಪಾಸಿನ ಭಜನಾ ಮಂಡಳಿಗಳು ಸೇರಿ ಪ್ರತೀ ಶನಿವಾರ ದಿನದಂದು ಬೆಳಗ್ಗೆ 7.30 ರಿಂದ 8.30ರವರೆಗೆ ಭಜನೆಯನ್ನು ಒಂದೊಂದು ಮಂಡಳಿಯವರು ವಹಿಸಿಕೊಂಡು ಮಾಡುವುದೆಂದು ತೀರ್ಮಾನಿಸಿ ಪ್ರತೀ ಶನಿವಾರ ಭಜನೆ ಸಂಕೀರ್ತನೆಯು ನಡೆಯುತ್ತದೆ . ಶ್ರೀ ಮುಖ್ಯಪ್ರಾಣ ದೇವಸ್ಥಾನವು ಮಂಗಳೂರು ತಾಲೂಕಿನ ಅಡ್ಡೂರು ಪೊಳಲಿ ಸಮೀಪದ ಪಲ್ಗುಣಿ ನದಿಯ ತಟದಲ್ಲಿ ಪೊನ್ನಂಗಿಲ ಕ್ಷೇತ್ರದಲ್ಲಿ ನೆಲೆನಿಂತು ನಂಬಿದ ಭಕ್ತರಿಗೆ ಇಂಬು ನೀಡುವ ” ಶ್ರೀ ಮುಖ್ಯಪ್ರಾಣ ” ಸೀಯಾಳಾಭಿಷೇಕ , ಹಣ್ಣುಕಾಯಿ , ಎಳ್ಳಣ್ಣೆ , ಹೂವು ಹಾಗೂ ಇನ್ನಿತರ ಹರಕೆಗಳನ್ನು ನೀಡಿ ಭಕ್ತಾಧಿಗಳು ಪ್ರಾರ್ಥಿಸುತ್ತಾರೆ .




