`ಯಾರ ಹಂಗಿಲ್ಲದೆ ಏಕಾಂಗಿಯಾಗಿ ನಮಗೆ ಸಂತೋಷವನ್ನು ನೀಡಬಲ್ಲ ಮಾಧ್ಯಮವೇ ಪುಸ್ತಕಗಳು. ಎಲ್ಲಾ ಭಾಷೆಗಳಲ್ಲೂ ಅನೇಕಾನೇಕ ಓದಿದಷ್ಟು ಮುಗಿಯದ ಪುಸ್ತಕ ಭಂಡಾರವಿದೆ. ಅದನ್ನು ಸದುಪಯೋಗಗೊಳಿಸುವುದು ಪ್ರತಿಯೊಬ್ಬನ ಕರ್ತವ್ಯ. ನಾವು ಪ್ರತಿಯೊಂದು ಪುಸ್ತಕವನ್ನು ಓದುವಾಗಲೂ ಅದರ ಒಳಿತು ಕೆಡುಕನ್ನು ಅರಿಯುತ್ತಾ ಓದಬೇಕು. ಓದುತ್ತಾ ಓದುತ್ತಾ ನಮ್ಮ ವಿವೇಚನಾ ಶಕ್ತಿ ಬೆಳೆಯುತ್ತದೆ.” ಎಂದು ವಿಠಲ ಪದವಿ ಪೂರ್ವ ಕಾಲೇಜಿನ ಮಾಜಿ ಪ್ರಾಂಶುಪಾಲ ಎಂ. ಅನಂತಕೃಷ್ಣ ಹೆಬ್ಬಾರ್ ಹೇಳಿದರು. ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತಾಡಿದರು.


ಗ್ರಂಥಾಲಯದಿಂದ ಅತೀ ಹೆಚ್ಚು ಪುಸ್ತಕಗಳನ್ನು ತೆಗೆದುಕೊಂಡು ಓದಿದ ವಿದ್ಯಾರ್ಥಿಗಳಾದ ವಿಘ್ನೇಶ್ ರೈ ಹಾಗೂ ಜೇಷ್ಠ ಇವರು ಗ್ರಂಥಗಳಿಗೆ ಪುಷ್ಪಾರ್ಚನೆಗೈದು ತಮ್ಮ ಅನುಭವದ ಮಾತುಗಳ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಯು ಎಸ್ ವಿಶ್ವೇಶ್ವರ ಭಟ್ ಪ್ರಾಸ್ತಾವಿಕ ಮಾತಾಡಿದರು. ರಾಕೇಶ್ ಸ್ವಾಗತಿಸಿದರು. ನಿಶಾಬಾನು ವಂದಿಸಿದರು. ಚೈತ್ರಪಾರ್ವತಿ ಕಾರ್ಯಕ್ರಮ ನಿರ್ವಹಿಸಿದರು
