ಸುರತ್ಕಲ್: ಗುರುಪುರ ಹೋಬಳಿಯ ತಾರಿಕರಿಯ ಮಾಣೈಬೆಟ್ಟು ನೂತನ ಕಾಂಕ್ರಿಟ್ ರಸ್ತೆಯನ್ನು ಮಂಗಳೂರು ಉತ್ತರ ವಲಯ ಶಾಸಕಮೊಯ್ದಿನ್ ಬಾವಾ ಉದ್ಘಾಟಿಸಿದರು.
ಈ ಸಂದರ್ಭ ಸುದ್ದಿಗರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ಗ್ರಾಮೀಣ ಭಾಗದ ಒಳ ರಸ್ತೆಗಳನ್ನು ಅಭಿವೃದ್ಧಿ ಗೊಳಿಸುವ ಬಗ್ಗೆ ಚಿಂತಿಸಿದ ಫಲವಾಗಿ ಶಾಸಕರ ಗ್ರಾಮೀಣ ಪ್ರದೇಶ ಅಭಿವೃದ್ಧಿ ನಿಧಿಯಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದರು.
ರಸ್ತೆ ನಿರ್ಮಾಣಕ್ಕೆ ಸ್ಥಳೀಯರೊಬ್ಬರು ತನ್ನ ಖಾಸಗಿ ಜಮೀನನ್ನು ನೀಡಿದ್ದು, ಅವರ ಸಮಾಜ ಸೇವೆ ಕೃತಜ್ಞತಾ ಪೂರ್ವವಾದುದು. ಅವರಿಗೆ ಗ್ರಾಮಸ್ಥರು ಹಾಗೂ ನಾನೂ ಚಿರಋಣಿ ಎಂದರು.
ಈ ಸಂದರ್ಭ ಗುರುಪುರ ಗ್ರಾಮ ಪಂಚಾಯತ್‍ನ ಮಾಜೀ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಸದಸ್ಯರಾದ ಟಿ. ಹನೀಫ್, ಯಶವಂತ ವಿ.ಶೆಟ್ಟಿ, ನೂರು ಇಸ್ಲಾಂ ಮಸೀದಿಯ ಅಧ್ಯಕ್ಷ ರಫೀಕ್, ಇಹ್‍ಸಾನುಲ್ ಮುಸ್ಲಿಮೀನ್ ಯಂಗ್‍ಮೆನ್ಸ್‍ನ ಅಧ್ಯಕ್ಷ ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
