ಸುರತ್ಕಲ್: ಪಡುಪೆರ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ವಿಕಾಸ ಯೋಜನೆಯ ವಿಶೇಷ ಗ್ರಾಮ ಸಭೆ ಮಂಗಲೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರು, ರಾಜ್ಯ ಸರಕಾರದ ಗ್ರಾಮ ವಿಕಾಸ ಯೋಜನೆಯ ವಿಶೇಷ ಅನುದಾನ ಘೋಷಣೆಯಾಗಿರುವ 10 ಗ್ರಾಮ ಪಂಚಾಯತ್‍ಗಳಲ್ಲಿ ಪಡುಪೆರ್ಲ ಗ್ರಾಮ ಪಂಚಾಯತ್ ಮೊದಲನೇಯದು ಎಂದರು.
ಗ್ರಾಮ ವಿಕಾಸ ಯೋಜನೆಯ ವಿಶೇಷ ಅನುದಾನ 75 ಲಕ್ಷ ರೂ. ಗಳನ್ನು ಉತ್ತಮ ಸಮಾಜ ಮುಖಿ, ಗ್ರಾಮದ ವಿಕಾಸಕ್ಕಾಗಿ ಬಳಸಿಕೊಳ್ಳಬೇಕೆಂದು ಪಂಚಾಯತ್‍ನ ಅಧೀಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಪಂಚಾಯತ್ ಸೂಕ್ತ ಸ್ಥಳಾವಕಾಶವನ್ನು ಒದಗಿಸಿ ಕೊಟ್ಟರೆ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿರುವ ಶಾದಿ ಮಹಲ್ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಪಂಚಾಯತ್ ರಾಜ್ ಎಂಜಿನಿಯರ್ ಸೃಜನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ., ಪಂಚಾಯತ್ ಅಧ್ಯಕ್ಷೆ ಶಾಂತಾ ಎಂ., ಉಪಾಧ್ಯಕ್ಷ ನೂರ್‍ಅಹ್ಮದ್, ತಾ.ಪಂ. ಸದಸ್ಯೆ ಶರ್ಲಿನ್ ಪೆರ್ನಾಂಡಿಸ್, ಗ್ರಾಮ ಪಂಚಾಯತ್ ಸದಸಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *