ಖ್ಯಾತ ಸ್ತ್ರೀ ಪಾತ್ರದಾರಿ ಪಾತಾಳ ವೆಂಕಟ್ರಮಣ ಭಟ್ಟರು 2015 ನೇ ಸಾಲಿನ ಅಗರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಡಿಸೆಂಬರ್ 25 ರಂದು ಸಂಜೆ 5ರಿಂದ ಗೋವಿಂದ ದಾಸ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಅಗರಿ ಶ್ರೀನಿವಾಸ ಭಾಗವತ ಸಂಸ್ಕರಣಾ ವೇದಿಕೆ ಸುರತ್ಕಲ್ ಇದರ ಗೌರವಾಧ್ಯಕ್ಷ ಅಗರಿ ರಘುರಾಮ ರಾವ್ ತಿಳಿಸಿದರು.

ಅವರು ಗೋವಿಂದದಾಸ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಕಚೇರಿಯಲ್ಲಿ ಕರೆಯಲಾಗಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು ಅಗರಿ ಶ್ರೀನಿವಾಸ ಭಾಗವತ ಸಂಸ್ಕರಣಾ ವೇದಿಕೆ ಸುರತ್ಕಲ್, ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರ ಸುರತ್ಕಲ್ ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕರಣಾ ಸಮಾರಂಭ ನಡೆಯಲಿದೆ ಎಂದರು.
ಸಹಕಾರಿ ಧುರೀಣ ಹಾಗೂ ಅರ್ಥಧಾರಿ ಕಜೆ ಈಶ್ವರ ಭಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಪ್ರಸಿದ್ದ ಹರಿದಾಸರಾದ ವೇ.ಮೂ.ಎಚ್. ವಾದೀಶ ಆಚಾರ್ ಕಾರ್ಯಕ್ರಮವನ್ನು ಉದ್ಧಾಟಿಸಲಿದ್ದಾರೆ. ಖ್ಯಾತ ಸಾಹಿತಿ ಡಾ.ತಾಳ್ತಜೆ ವಸಂತ್ ಕುಮರ್ ಅಗರಿ ಸಂಸ್ಮರಣೆ ಮತ್ತು ಅಭಿನಂಧನೆ ಗೈಯಲಿದ್ದಾರೆ ಅಲ್ಲದೆ, ಈ ಸಮಾರಂಭದಲ್ಲಿ 2015 ನೇ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಿಕಾ ವರದಿಗಾರ ಲೋಕೇಶ್ ಸುರತ್ಕಲ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉಬರ್ಾನ್ ಪಿಂಟೊ, ಯಕ್ಷ ನಂದನದ ಸಂಚಾಲಕ ಸಂತೋಷ್ ಐತಾಳ್ರನ್ನು ಅಭಿನಂದಿಸಲಾಗುವುದು, ಅದೇ ದಿನ ಸಂಜೆ 3 ಗಂಟೆಯಿಂದ ಬಯಲು ರಂಗಮಮದಿರದಲ್ಲಿ ಬಲಿ ವಾಮನ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಕೃಷ್ಣ ಮೂರ್ತಿ , ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ ಉಪಸ್ಥಿತರಿದ್ದರು.
