ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ರಿ. ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಬಂಟ್ವಾಳ ವಲಯ ಸದಸ್ಯರ ಕ್ರೀಡಾಕೂಟವನ್ನು ಶ್ರೀ ಶಾರದಾ ಪ್ರೌಢಶಾಲಾ ಮೈದಾನ ಪಾಣೆಮಂಗಳೂರಿನಲ್ಲಿ ಜಿಲ್ಲಾ ಸಮಿತಿ ಸಂಚಾಲಕ ವಿಠಲ ಚೌಟ ಉದ್ಘಾಟಿಸಿದರು.
ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಕೋಶಾಧಿಕಾರಿ ದಯಾನಂದ ಬಂಟ್ವಾಳ್, ವಲಯಾಧ್ಯಕ್ಷ ಸುಕುಮಾರ್ ಬಂಟ್ವಾಳ್ , ಗೌರವಾಧ್ಯಕ್ಷ ಆನಂದ್ , ಜಿಲ್ಲಾ ಉಪಾಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ , ಶ್ರೀಧರ ಶೆಟ್ಟಿಗಾರ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಜಯಂತ್ ಪುತ್ತೂರು, ವಿನೋದ್ ಕಾಂಚನ್, ಹರೀಶ್ ಬಂಟ್ವಾಳ, ಗೋಪಾಲ್ಕೃಷ್ಣ , ರಾಜೇಂದ್ರ, ಹರೀಶ್ ಕುಂದರ್, ರವಿಪ್ರಕಾಶ್, ಹರೀಶ್ ನಾಟಿ, ಭಾಸ್ಕರ್ ಬಂಟ್ವಾಳ, ವಿಕೇಶ್ ಉಪಸ್ಥಿತರಿದ್ದರು.

