ಮೂಡುಬಿದರೆ: ಪಾಲಡ್ಕ ಪಂಚಾಯಿತಿ ಕಚೇರಿಯಲ್ಲಿ ನನಗೆ ಜೀವಬೆದರಿಕೆಯೊಡ್ಡಿದ್ದ ಜಿಪಂ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ವಿರುದ್ಧ ನೀಡಿದ ದೂರಿಗೆ ಪೆÇಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೃಷಿಕ ಅಂಬ್ರೋಸ್ ಪಿಂಟೊ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಡ್ಕ ಗ್ರಾ.ಪಂ.ನ ಸಾಮಾನ್ಯ ಸಭೆಯ ಬಗ್ಗೆ ಪಿಡಿಒ ನನ್ನ ಪತ್ನಿ, ಪಂಚಾಯತ್ ಸದಸ್ಯೆ ಪೆಲ್ಸಿ ಪಿಂಟೊ ಅವರಿಗೆ ನೋಟಿಸ್ ಕಳಿಸಿದ್ದರು ಅದರಲ್ಲಿ ಸಭೆಯ ದಿನಾಂಕ, ಸಮಯ ಇರಲಿಲ್ಲ. ಪತ್ನಿಯನ್ನು ಅವಮಾನಿಸುವ ಮತ್ತು ಸಭೆಗೆ ಹಾಜರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು.
ಈ ಬಗ್ಗೆ ಪಿಡಿಒ ಬಳಿ ಮಾತನಾಡಲು ನವೆಂಬರ್ 9ರಂದು ಪತ್ನಿ ಜತೆ ಪಂಚಾಯಿತಿಗೆ ಹೋದಾಗ ಹೋಗಿದ್ದೆ. ಪಂಚಾಯಿತಿ ಸದಸ್ಯ ಸುಚರಿತ ಶೆಟ್ಟಿ ನನಗೆ ಅವಾಚ್ಯ ಶಬ್ದಗಳಿಂದ ಮತ್ತು ಏಕವಚನದಿಂದ ಬೈದು ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ನವೆಂಬರ್ 11ರಂದು ನಾನು ಪೆÇಲೀಸರಿಗೆ ದೂರು ನೀಡಿದ್ದು ಇದುವರೆಗೂ ವಿಚಾರಣೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ಪೆÇಲೀಸರು ಪ್ರಭಾವಿಗಳ ಪರವಾಗಿ ವರ್ತಿಸಿದರೆ ಜನಸಾಮಾನ್ಯರಿಗೆ ನ್ಯಾಯ ಕೊಡುವವರ್ಯಾರು ಎಂದು ಅವರು ಪ್ರಶ್ನಿಸಿದರು.
ಪಿಡಿಒ ಕೂಡ ರಾಜಕಾರಣಿಗಳಂತೆ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಆರೋಪಿಸಿದರು. ಪಂಚಾಯಿತಿ ಸದಸ್ಯ ಸತೀಶ್ ಮಾರ್ಲ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *