ವಿಟ್ಲ: ಚಂದಳಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಗಶ್ರೀ ಫ್ರೆಂಡ್ಸ್ ಅಬೀರಿ ಮತ್ತು ಯುವ ಕೇಸರಿ ಅತಿಕಾರಬೈಲು ಇವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಮತ್ತು ಹಗ್ಗ ಜಗ್ಗಾಟದ ` ದೀಪಾವಳಿ ಟ್ರೋಫಿ 2015′ ಯ ಬಹುಮಾನ ವಿತರಣಾ ಹಾಗೂ ಸನ್ಮಾನ ಕಾರ್ಯಕ್ರಮವು ವಿಠಲ ಪೂಜಾರಿ ಅತಿಕಾರಬೈಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪದ್ಮಾ ಎಂಟರ್ ಪ್ರೈಸಸ್ ತಂಡ, ದ್ವಿತೀಯ ಮಹಾದೇವಿ ಕಬಕ ತಂಡ, ತೃತೀಯ ಕೈಂತಿಲ ಬ್ರದರ್ಸ್ ತಂಡ ಹಾಗೂ ಚತುರ್ಥ ವಿಷ್ಣಮೂರ್ತಿ ಕುಂಡಡ್ಕ ತಂಡ ಪಡೆದಿರುತ್ತದೆ. ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ನಾಗಶ್ರೀ ಫ್ರೆಂಡ್ಸ್ ಅಬೀರಿ ಹಾಗೂ ದ್ವಿತೀಯ ಸ್ಥಾನ ಶ್ರೀ ಸಾಯ ಕಾಶಿಮಠ ಇವರು ಪಡೆದಿರುತ್ತಾರೆ. ಕಬಡ್ಡಿಯಲ್ಲಿ ಉತ್ತಮ ಹಿಡಿತಗಾರ ವಿಶ್ವರಾಜ್, ಉತ್ತಮ ದಾಳಿಗಾರ ದೀಕ್ಷಿತ್ ಹಾಗೂ ಸವ್ಯಸಾಚಿ ಭರತ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ.
ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಬಡ್ಡಿ ಆಟಗಾರರಾದ ಗಾಯತ್ರಿ ಉರಿಮಜಲು ಹಾಗೂ ಮನ್ವಿತ್ ಪಿ ಇವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹೇಶ್ ಪಡೀಲ್, ವಿಷ್ಣುಗುಪ್ತ ಪುಣಚ, ಬಾಬು ಬಿ ಕೆ ಮೇಗಿನಪೇಟೆ, ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಪ್ರಶಾಂತ್ ಶೆಟ್ಟಿ ಕುಂಡಡ್ಕ, ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ವನೀತ್ ಅಬೀರಿ ಇವರು ಭಾಗವಹಿಸಿರುತ್ತಾರೆ. ಸುಶಾಂತ್ ಸಾಲಿಯಾನ್ ಸ್ವಾಗತಿಸಿದರು. ದಿವಾಕರ ಶೆಟ್ಟಿ ಅಬೀರಿ ವಂದಿಸಿದರು. ಗಂಗಾಧರ ಸಿ ಹೆಚ್ ನಿರೂಪಿಸಿದರು. ಗಣೇಶ್ ಅಬೀರಿ ಸಹಕರಿಸಿದರು



