ಕೈಕಂಬ : ಬಂಟ್ವಾಳ ತಾಲೂಕಿನ ಬೆಳ್ಳೂರು ಕಾವೇಶ್ವರ ದೇವಳದಲ್ಲಿ ವೃಸಿಕ ಮಾಸದಲ್ಲಿ ನ.23ರಂದು ಸೋಮವಾರ ಕ್ಷೇತ್ರದ ತಂತ್ರ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ 21ನೇ ವರ್ಷದ  ಸಾರ್ವಜನಿಕ ಶತರುದ್ರಾಭಿಷೇಕ, ಗಣಯಾಗ, ಸೀಯಾಳಾಭಿಷೇಕ, ದೈವತಂಬಿಲ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು.

14

15

2

4

5

6

7

8

9

11

12

13

1

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ದೇವಳದ ರಘು ಎಲ್ ಶೆಟ್ಟಿ, ಬಾರಿ ಭಂಡಾರಿ, ಬೆಳ್ಳೂರು ಪರಾರಿ ಸಂತೋಷ್ ಕುಮಾರ್ ರೈ, ಸವಿತಾ ಎನ್ ಶೆಟ್ಟ, ಉಮೇಶ್ ಶೆಟ್ಟಿ ಪರಿಮೊಗರು, ಕಿಶೋರ್ ಭಂಡಾರಿ, ದೇವಪ್ಪ ಪೂಜಾರಿ, ಯೋಗಿಶ್ ಪೂಜಾರಿ , ಅನಂತರಾಮ್ ಹೇರಳ, ರಘುರಾಮ್ ಭಟ್, ಮಾಡ್ಲಾಯ ಪಾತ್ರಿ ಚಂದ್ರಶೇಖರ ಅಜಿಲ, ದೇವಳದ ಅರ್ಚಕ ಪ್ರಕಾಶ್ ಭಟ್ ಮತ್ತು ಊರಿನ ಭಕ್ತಾಧಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ರಾತ್ರಿ ರಂಗಪೂಜೆ:-
ಶ್ರೀ ಕ್ಷೇತ್ರದಲ್ಲಿ ರಾತ್ರಿ ಅಪ್ಪದಪೂಜೆ , ದೀಪದರಂಗ ಪೂಜೆ ನಡೆಯಲಿದೆ .

By suddi9

Leave a Reply

Your email address will not be published. Required fields are marked *