ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ನ. 20ರಂದು ಶುಕ್ರವಾರ ಮಧ್ಯಾಹ್ನ ದೇವಿಗೆ ಲಕ್ಷ ಕುಂಕುಮಾರ್ಚನೆ ನಡೆಯಿತು.

ಪ್ರಧಾನ ಅರ್ಚಕ ಪವಿತ್ರಪಾಣಿ ಮಾಧವ್ ಭಟ್, ದೇವಳದ ಅರ್ಚಕರಾದ ನಾರಾಯಣ್ ಭಟ್, ಪರಮೇಶ್ವರ್ ಭಟ್, ರಾಮ್ ಭಟ್ ಹಾಗೂ ಅರ್ಚಕರು ಪಾಲ್ಗೊಂಡಿದ್ದರು.
ದೇವಳದ ಆಡಳಿತ ಮೊಕ್ತೇಸರ ಡಾ ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಯು.ತಾರನಾಥ ಆಳ್ವ , ಚೇರ ಸೂರ್ಯನಾರಾಯಣ ರಾವ್ , ದೇವಳದ ಕಾರ್ಯನಿರ್ವಾಹಣಧಿಕಾರಿ ಹರೀಶ್ಚಂದ್ರ ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ನಿತ್ಯ ಬಲಿ ಉತ್ಸವ ನಡೆಯಿತು.





