ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ಪ್ರಾತಃಕಾಲ 5.30ಕ್ಕೆ ಏಕಾಹ ಭಜನೆ ಪ್ರಾರಂಭಗೊಂಡಿತು.
ಕಾರ್ತಿಕ ಶುದ್ಧ(ದೇವಪ್ರಚೋದಿನೀ)ಏಕಾದಶಿಯ ದಿನ ಸೂರ್ಯೋದಯಕಾಲಕ್ಕೆ ದೇವಳದ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ ಅವರು ದೀಪ ಪ್ರಜ್ವಲನಗೊಳಿಸಿ ಏಕಾಹ ಭಜನೆಗೆ ಸಾಂಪ್ರದಾಯಿಕ ಚಾಲನೆ ನೀಡಿದರು.ಸೋಮವಾರ ಪ್ರಾತಃಕಾಲ 5.30 ರವರೆಗೆ 24 ಗಂಟೆಗಳ ನಿರಂತರ ಭಜನೆಯಲ್ಲಿ ಸುಮಾರು 23 ಭಜನಾ ತಂಡಗಳು.300ಕ್ಕೂ ಅಧಿಕ ಭಜನೆಗಳನ್ನು ಹಾಡುತ್ತಾರೆ.


