ಮಂಗಳೂರು, ನಗರದ ಪ್ರತಿಷ್ಠಿತ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಭಂಡಾರಿ ಬಿಲ್ಡರ್ಸ್ ವಿನೂತನ ವಸತಿ ಸಮುಚ್ಛಯ ಭಂಡಾರಿ ಸಾರಿಟೇರ್ ಕದ್ರಿ ಮಲ್ಲಿಕಟ್ಟೆಯಲ್ಲಿ ಇಂದು ಉದ್ಘಾಟನೆಗೊಂಡಿತು. ಆ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಮತ್ತು ಎ.ಜೆ.ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ.ಶೆಟ್ಟಿ ಆಗಮಿಸಿದ್ದರು.ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ಕದ್ರಿ ವಾರ್ಡ್ ನ ಕಾರ್ಪೊರೇಟರ್ ಡಿ.ಕೆ.ಅಶೋಕ್ ಕುಮಾರ್ ಮತ್ತು ಮಂಗಳೂರು ಕ್ರೆಡಾ ಅಧ್ಯಕ್ಷ ಡಿ.ಬಿ.ಮೆಹ್ತಾ ಇವರುಗಳು ಈ ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿದ್ದರು.

ಬೆಳೆಯುತ್ತಿರುವ ಮಂಗಳೂರು ನಗರದ ವಿವಿಧ ಸಂಸ್ಥೆಗಳು, ಉದ್ಯಮ ಕ್ಷೇತ್ರಗಳು, ಆಸ್ಪತ್ರೆಗಳು ಹಾಗೂ ಜನದಟ್ಟಣೆಯಿಂದಾಗಿ ಕದ್ರಿ ಮಲ್ಲಿಕಟ್ಟೆ ಬಳಿ 4 ಅಂತಸ್ತಿನ 13 ಫ್ಲಾಟುಗಳನ್ನು ಭಂಡಾರಿ ಸಾಲಿಟೇರ್ ಹೊಂದಿದೆ. ಆ ವಸತಿ ಸಮುಚ್ಚಯ 2 ಮತ್ತು 3 ಬೆಡ್ರೂಮಿನ ಒಟ್ಟು 13 ಫ್ಲಾಟ್ಗಳನ್ನು ಹೊಂದಿದ್ದು, ಈ ವಸತಿ ಸಮುಚ್ಚಯವು ಕದ್ರಿ ದೇವಸ್ಥಾನದ ಪರಿಸರ, ಸ್ಥಳ ಮತ್ತು ಸುತ್ತಮುತ್ತಲಿನ ಪ್ರಕೃತಿಯ ಹಿನ್ನಲೆಗನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಈ ವಸತಿ ಸಮುಚ್ಚಯವು ನಗರದ ವಿವಿಧ ವಿದ್ಯಾಸಂಸ್ಥೆಗಳು, ಉದ್ಯಮ ಕ್ಷೇತ್ರಗಳು, ಆಸ್ಪತ್ರೆಗಳು ಹಾಗೂ ಕದ್ರಿ ಪಾರ್ಕ್ ಗೆ ಅತೀ ಸಮೀಪವಿರುತ್ತದೆ. ಇದರ ನಿರ್ಮಾತೃ ಸಂಸ್ಥೆ ಭಂಡಾರಿ ಬಿಲ್ಡರ್ಸ್ 9001-2008 ಅಧಿಕೃತ ಪ್ರಮಾಣಪತ್ರವನ್ನು ಹೊಂದಿದ್ದು ಇವರ ಎಲ್ಲಾ ವಸತಿ ಯೋಜನೆಗಳು ಉತ್ಕ್ರಷ್ಟ ಗುಣಮಟ್ಟವನ್ನು ಕಾಯ್ದುಕೊಂಡಿದೆ.
ಈ ಭಂಡಾರಿ ಸಾಲಿಟೇರ್ ವಸತಿ ಸಮುಚ್ಚಯವು ವಿವಿಧ ಆಧುನಿಕ ಸೌಕರ್ಯವನ್ನೊಳಗೊಂಡಿದ್ದು ಇಂಟರ್ಕಾಮ್, ಎಲೆಕ್ಟ್ರಾನಿಕ್ ಕಾರ್ಡ್ ಆ್ಯಕ್ಸೆಸ್, ಅಗ್ನಿಶಾಮಕ ವ್ಯವಸ್ಥೆ, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ಮನೋರಂಜನಾ ಸಭಾಂಗಣ, ಮಕ್ಕಳ ಆಟಕ್ಕೆ ಸೀಮಿತವಾದ ಸ್ಥಳ, ಆವೃತಗೊಂಡ ರೂಫ್ ಟಾಪ್, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸಿಸಿ ಕ್ಯಾಮೆರಾ ಮತ್ತು ರೆಕಾರ್ಡ್ಗೆ ವ್ಯವಸ್ಥೆಗಳನ್ನು ಇವು ಒಳಗೊಡಿರುತ್ತದೆ.
ಕದ್ರಿ ಜಾರ್ಜ್ ಮಾರ್ಟೀಸ್ ರಸ್ತೆಯಲ್ಲಿರುವ ಭಂಡಾರಿ ಬಿಲ್ಡರ್ಸ್ ಸಂಸ್ಥೆಯ ನೂತನ ವಸತಿ ಸಮುಚ್ಛಯ ಭಂಡಾರಿ ಪಾರ್ಕ್ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವಸತಿ ಸಮುಚ್ಛಯವು 1,2 ಮತ್ತು 3 ಬೆಡ್ ರೂಮಿನ ಪ್ಲಾಟ್ ಗಳು ಸರ್ವ ವಿಧದ ಆಧುನಿಕ ಸೌಕರ್ಯಗಳನ್ನು ಹೊಂದಿವೆ. ಇವರ ಇನ್ನೊಂದು ಎಪಾರ್ಟ್ ಮೆಂಟ್ ಭಂಡಾರಿ ವರ್ಟೀಕಾ ಕದ್ರಿಯ ಪಿಂಟೋಸ್ ಲೇನ್ ನಲ್ಲಿ ಮೂಡಿ ಬರಲಿದೆ. ಭಂಡಾರಿ ಬಿಲ್ಡರ್ಸ್ ವಸತಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.bhandarybuilders.com ಅನ್ನು ಸಂಪರ್ಕಿಸಲು ಕೋರಲಾಗಿದೆ.


