ಬಂಟ್ವಾಳ:ಬಜರಂಗ ದಳ ಶನಿವಾರ ದ.ಕ.ಜಿಲ್ಲಾ ಬಂದ್ ಕರೆಗೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ತಾಲೂಕಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ಬ್ರಹ್ಮರಕೂಟ್ಲು ,ಸೊರ್ನಾಡು,ಕಲ್ಲಡ್ಕ,ಸೂರಿಕುಮೇರು,ಬಡಗ ಬೆಳ್ಳೂರು,ನೆಟ್ಲದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ,ರಸ್ತೆಗೆ ಟಯರ್ ಇಟ್ಟು ಬೆಂಕಿಹಚ್ಚಿರುವ ಘಟನೆ ಹೊರತುಪಡಿಸಿದಂತೆ ಯಾವುದೆ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದಲೇ ಮುಚ್ಚಿದ್ದರೆ ಸರ್ವಿಸ್, ಖಾಸಗಿ ,ಸರ್ಕಾರಿ ಬಸ್‍ಗಳು ಸಹಿತಗಳು ಯಾವುದೇ ಟ್ಯೂರಿಸ್ಟ್ ವಾಹನಗಳು ,ಅಟೋರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ.ಇದರಿಂದಾಗಿ ಸದಾ ಗಿಜಿಗುಡುತ್ತಿದ್ದ ಬಿ.ಸಿ.ರೋಡ್ ಬಸ್ ನಿಲ್ದಾಣ ಬಿಕೋ ಅನ್ನಿಸುತ್ತಿತ್ತು.ತಾಲೂಕು ಕಚೇರಿ ಸಹಿತ ಎಲ್ಲ ಸರ್ಕಾರಿ ಕಚೇರಿಗಳು ತೆರೆದು ಎಂದಿನಂತೆ ಕಾರ್ಯನಿರ್ವಹಿಸಿದ್ದರೂ ಸಿಬಂದಿಗಳ ಸಂಖ್ಯೆ ಕಡಿಮೆ ಇದ್ದು ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದು ,ಕೇಂದ್ರದ ಐಆರ್‍ಬಿ ಸಹಿತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.ಗುರುವಾರ ಸಂಜೆ ಬಿ.ಸಿ.ರೋಡ್ ನಲ್ಲಿ ಸಂಘಟನೆಯೊಂದು ಅನುಮತಿ ಇಲ್ಲದೆ ಆಯೋಜಿಸಿದ ಸಂರ್ಧಭದಲ್ಲಿ ಕಲ್ಲು ತೂರಾಟ ನಡೆದುಉದ್ವಿಘ್ನ ಸ್ಥಿತಿ ನಿರ್ಮಾಣ ಗೊಂಡಿತ್ತು.ಇದಾದ ಬೆನ್ನಲ್ಲೆ ಬಂಟ್ವಾಳಕ್ಕೆ ಸಮೀಪದ ನಾವೂರ ಹಳೆಗೇಟಿನಲ್ಲಿ ಕ್ರಿಕೇಟ ಆಡಿ ಮನೆಗೆ ತೆರಳುತ್ತಿದ್ದ ಅಮಾಯಕ ಯುವಕರಾದ ಸ್ಥಳೀಯ ನಿವಾಸಿಗಳಾದ ಹರೀಶ್ ಹಾಗೂ ಶಮೀವುಲ್ಲ ಎಂಬವರಿಗರ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಪರಾರಿಯಾಗಿತ್ತು.ಈ ಘಟನೆಯಿಂದಾಗಿ ಪರಿಸ್ಥಿತಿ ಮತ್ತೆ ಬಿಗಾಡಾಯಿಸಿತ್ತು.ಚೂರಿ ಇರಿತಕ್ಕೆ ಒಳಗಾಗಿದ್ದ ಗಾಯಾಳುಗಳ ಪೈಕಿ ಹರೀಶ ಸಾವನ್ನಪ್ಪಿದ್ದ.
ಗಣ್ಯರ `Éೀಟಿ:ಕೊಲೆಗೀಡಾದ ಹರೀಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮನೆಗೆ ಸಾಗಿಸುವ ಸಂರ್ಧಭದಲ್ಲಿ ಬಿ.ಸಿ ರೋಡ್ ನಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಅಂತಿಮ ನಮನ ಸಲ್ಲಿಸಿದರು.ಬಳಿಕ ಮೆರವಣಿಗೆ ಮೂಲಕ ಮೃತದೇಹವನ್ನು ಮನೆಗೆ ಸಾಗಿಸಲಾಗಿದ್ದು ಬಂಟ್ವಾಳ ಬಸ್ಸ್ಟ್ಯಾಂಡ್ ಪಾಸ್ ಬಳಿಯಲ್ಲೂ ಹಿಂದೂಪರ ಸಂಘಟನೆಗಳು ಸೇರಿದ್ದರು.ಮನೆಗೆ ಮೃತದೇಹ ತಲುಪುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.ಸಚಿವ ಬಿ.ರಮಾನಾಥ ರೈ,ವಿ.ಪ.ಸದಸ್ಯ ಐವಾನ್ ಡಿಸೋಜ,ಜಿಲ್ಲಾ„ಕಾರಿ ಬಿ.ಇಬ್ರಾಹಿಮ್,ಜಿಲ್ಲಾಪೊಲೀಸ್ ವರಿಷ್ಠಾ„ಕಾರಿ ಡಾ|ಶರಣಪ್ಪರವರು,ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಅ`À್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ,ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ ,ಬೂಡಾ ಅ`À್ಯಕ್ಷ ಪಿಯೂಸ್ ರೊಡ್ರಿಗಸ್,ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಮೃತರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ ಸರಕಾರದಿಂದ 5 ಲಕ್ಷ ರೂ.ಪರಿಹಾರವನ್ನು ಒದಗಿಸುವ ಭರವಸೆಯನ್ನು ಸಚಿವ ರಮಾನಾಥ ರೈ ಅವರು ಘೋಷಿಸಿದರು.ಹಾಗೆಯೇ ಸಂಸದ ನಳಿನ್ ಕುಮಾರ್ ಕಟೀಲ್,ವಿ.ಪ,.ಸದಸ್ಯ ಗಣೇಶ್ ಕಾರ್ಣಿಕ್,ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ,ಬಿಜೆಪಿ ಮುಖಂಡರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು,ಉಮಾನಾಥ ಕೋಟ್ಯಾನ್,ರುಕ್ಮಯ ಪೂಜಾರಿ,ಸುಲೋಚನಾ `Àಟ್,ತುಂಗಪ್ಪ ಬಂಗೇರ,ದಿನೇಶ್ ಭಡಾರಿ,ಗೋವಿಂದ ಪ್ರಭು,ಉದಯ ರಾವ್ ,ದಿನೇಶ್‍ಅಮ್ಟೂರು,ಆನಂದ ಶಂ`Àೂರು,ಆರೆಸ್ಸೆಸ್ ಮುಖಂಡ ಡಾ|ಪ್ರಭಾಕರ ಭಟ್ ಕಲ್ಲಡ್ಕ,ಹಿಂದೂಪರ ಸಂಘಟನೆಯ ಪ್ರಮುಖರಾದ ಶರಣ್ ಪಂಪವೆಲ್ ,ಜಗದೀಶ ಶೇಣವ,ಜಿತೇಂದ್ರ ಕೊಟ್ಟಾರಿ,ಪದ್ಮನಾಭ ನಾವೂರ ಮತ್ತಿತರರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೆ ಹಿಂದೂಪರ ಸಂಘಟನೆಯಿಂದ ಹತ್ತು ಲಕ್ಷ ರೂ.ಪರಿಹಾರವನ್ನು ಪ್ರಕಟಿಸಿದರು.
ಕಳಚಿದ ಕೊಂಡಿ :ಹಳೆಗೇಟಿನ ಶ್ರೀನಿವಾಸ ಪೂಜಾರಿ ಮತ್ತು ಸೀತಮ್ಮ ರವರ ಏಕಮಾತ್ರ ಪುತ್ರನಾಗಿರುವ ಹರೀಶ್ ಅವರ ಕೊಲೆಯಿಂದ ಮನೆಯ ಅ`Áರ ಸ್ಥಂ`Àವೇ ಕುಸಿದಂತಾಗಿದೆ.ತಂದೆ ಕ್ಯಾನ್ಸರ್ ರೋಗದಿಂದ ಹಾಸಿಗೆ ಹಿಡಿದಿದ್ದಾರೆ.ಮಗನನ್ನು ಕಳಕೊಂಡ ತಾಯಿ ಮತ್ತು ತಂಗಿ ಕಂಗಾಲಾಗಿದ್ದಾರೆ.
ತಿಂಗಳಲ್ಲಿ ಎಂಟು ಕೊಲೆ-ನಳಿನ್
ಒಂದೇ ತಿಂಗಳಿನಲ್ಲಿ ದ.ಕ.ಜಿಲ್ಲೆಯಲ್ಲಿ ಎಂಟು ಕೊಲೆಗಳು ನಡೆದಿದ್ದು ಇದ್ದು ಸರಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.ಮುಖ್ಯಮಂತ್ರಿ,ಗೃಹಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ ಎಂದು ಸಂಸದ ನಳಿನ್ ಕುಮಾರ್ ಅವರು ಆರೋಪಿಸಿದ್ದಾರೆ.ಮೃತರ ಮನೆಗೆ `Éೀಟಿ ನೀಡಿದ ಸಂರ್ಧಭದಲ್ಲಿ ಇದು ಕಾಂಗ್ರೆಸ್ ಪ್ರಾಯೋಜಿತ ಕೃತ್ಯ,ಮೃತರ ಕುಟುಂಬಕ್ಕೆ 25ಲಕ್ಷ ಪರಹಾರ ಒದಗಿಸಬೇಕೆಂದು ಆಗ್ರಹಿಸಿದ ಅವರು ಮಡಿಕೇರಿಯ ಕುಟ್ಟಪ್ಪ ಹತ್ಯೆ ಯಂತೆ ಈ ಪ್ರಕರಣವನ್ನು ತಿರುಚಲು ಯತ್ನಿಸಿದಲ್ಲಿ ಮುಂದಾಗುವ ಎಲ್ಲಾ ಅನಾಹುತಗಳಿಗೆ ಗೃಹ ಇಲಾಖೆಯೇ ಹೊಣೆ ಎಂದರು.
ಸುಮ್ಮನೆ ಬಿಡುವುದಿಲ್ಲ-ಸಚಿವ ರೈ:ಮತೀಯ ಸಂಘರ್ಷಕ್ಕೆ ಪ್ರೇರಣೆ ನೀಡಿ ಶಾಂತಿಯನ್ನು ಕದಡುವ ದುಷ್ಕರ್ಮಿಗಳು ಯಾರೇ ಆದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದುಸಚಿವ ರಮಾನಾಥ ರೈ ಅವರು ಗುಡುಗಿದ್ದಾರೆ.ಇಂತಹ ಘಟನೆಯಿಂದಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ.ಜಿಲ್ಲೆಯಲ್ಲಿ ಶಾಂತಿ ಕದಡಿಸುವ ಯಾವುದೇ ಸಂಘಟನೆಯ ಕಾರ್ಯಕರ್ತನಾಗಿದ್ದರೂ ಅವರನ್ನು ಬಂ„ಸುವ ಕೆಲಸ ಮಾಡಿಯೇ ಸಿದ್ಧ ಎಂದ ಸಚಿವರು ಹತ್ಯೆಗೀಡಾದ ಹರೀಶ್ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದಿಂದಲೂ ಅರ್ಥಿಕ ಸಹಾಯ ನೀಡಲಾಗುವುದು.
ಅಂತಿಮ ಸಂಸ್ಕಾರ:ಹತ್ಯೆಗೀಡಾದ ಹರೀಶ್ ಅವರ ಮೃತದೇಹದ ಅಂತಿಮ ಸಂಸ್ಕಾರದ ಬಂಟ್ವಾಳದ ಬಡ್ಡಕಟ್ಟೆಯ ಹಿಂದೂ ರುದ್ರ `Àೂಮಿಯಲ್ಲಿ ನೆರವೇರಿತು.ಸಾವಿರಾರು ಸಂಖ್ಯೆಯಲ್ಲಿ ಈ ಸಂರ್ಧಭ ಸಾರ್ವಜನಿಕರು ಸೇರಿದ್ದರು.ಓಟ್ಟಾರೆ ಬಂದ್ ಹಿನ್ನೆಲೆಯಲ್ಲಿ ಬಂಟ್ವಾಳ,ಬಿ.ಸಿ.ರೋಡ್ ಪರಿಸರ ಬೂದಿ ಮುಚ್ಚಿದ ಕೆಂಡದಂತಿದ್ದರೂ ಪರಿಸ್ಥಿತಿ ಶಾಂತವಾಗಿದೆ.
ಸ್ಥಳಕ್ಕೆ ಐ.ಜಿ.`Éೀಟಿ:ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಐಜಿಪಿ ಅಮೃತ್ ಪಾಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ ಮೃತರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.ಖುದ್ದು ಘಟನೆಗೆ ಸಂಬಂ„ಸಿ ತನಿಖೆಗೆ ತನ್ನ ಕೈಕೆಳಗಿನ ಪೊಲೀಸ್ ಅ„ಕಾರಿಗಳಿಗೆ ಮಾರ್ಗದರ್ಶನ ನೀಡಿದರು.
