ಬಂಟ್ವಾಳ : ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ವಹಿಸಲಾಗುವ ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆ ಯಿಂದ ಅರಳ ಗ್ರಾಮದ ಅಲಂಬುಡೆ ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ ರೂ.10ಲಕ್ಷ ವೆಚ್ಚದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.

ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್ , ಎಫ್ರೆಂ ಸಿಕ್ವೇರಾ, ಬಂ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರುಗಳಾದ ಅರುಣ್ ಪ್ರಕಾಶ್ ಡಿಸೋಜ, ಗೋಪಾಲ್, ಪ್ರೀತಂ, ಕಾನೂನು ಸೇವಾ ಸಮಿತಿ ಸದಸ್ಯ ವಿಶ್ವನಾಥ ಕಲ್ಲೇರಿ, ಗ್ರಾಮ ಪಂ.ಅಧ್ಯಕ್ಷೆ ತುಂಗಮ್ಮ , ಉಪಾಧ್ಯಕ್ಷೆ ಜಗ ದೀಶ ಆಳ್ವ , ವಲಯ ಕಾಂಗ್ರೇಸ್ ಅಧ್ಯಕ್ಷ ಅಶ್ರಫ್ ಕುಟ್ಟಿಕಲ, ಪಂ.ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ , ಡೊಂಬಯ್ಯ, ಎಂ.ಬಿ.ಅಶ್ರಫ್, ಪ್ರಮುಖರಾದ ಜಗದೀಶ್ ಕೊಯಿಲ, ಪುರಂದರ ಶೆಟ್ಟಿ, ಹಾಜಿ ಅಬ್ದುಲ್ ರಝಾಕ್ , ದೇಜಪ್ಪ ಡಿ. , ಗಣೇಶ್ ಶೆಟ್ಟಿ, ರವಿ ಅರಸ, ಎಚ್. ಖಾಲಿದ್ ಉಪಸ್ಥಿತರಿದ್ದರು.
