ಬಂಟ್ವಾಳ: ಪುನರ್ ನಿರ್ಮಾಣಗೊಳ್ಳುತ್ತಿರುವ ಸಜೀಪಮೂಡದ ಈಶ್ವರಮಂಗಲ ಶ್ರೀ ಸದಾಶಿವ ದೇವಾಲಯಕ್ಕೆ ರಾಜ್ಯ ಧಾರ್ಮಿಕ ಪರಿಷತ್‍ನ ಸದಸ್ಯರಾದ ಎನ್.ಕೆ. ಜಗನ್ನಿವಾಸ ರಾವ್ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಹೆಚ್ಚಿನ ನೆರವು ಒದಗಿಸಿ ಕೊಡುವ ಭರವಸೆ ನೀಡಿದರು.

DSC_9617ಈ ಸಂದರ್ಭ ದೇವಸ್ಥಾನ ಜೀರ್ಣೋದಾರ ಸಮಿತಿ ಅಧ್ಯಕ್ಷ ಬಿ. ಸದಾನಂದ ಪೂಂಜಾ, ಪದಾಧಿಕಾರಿಗಳಾದ ಎಂ. ಸುಬ್ರಹ್ಮಣ್ಯ ಭಟ್, ಜಯಶಂಕರ ಬಾಶ್ರೀತ್ತಾಯ, ಕೆ. ಸದಾನಂದ ಶೆಟ್ಟಿ, ಮಾರಪ್ಪ ಕೊಟ್ಟಾರಿ, ಯೋಗೀಶ ಬೆಳ್ಚಾಡ, ಶೋಭಿತ್ ಪೂಂಜಾ, ಕೆ. ಪದ್ಮನಾಭ ಮಯ್ಯ, ಕೃಷ್ಣ ಶ್ಯಾಮ. ಎಂ. , ಗೋಪಿಕೃಷ್ಣ ಕಿಣಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *