ಮೂಡುಬಿದರೆ: ತೋಡಾರಿನಲ್ಲಿ ಟಿಪ್ಪು ಜಯಂತಿ ಬ್ಯಾನರಿಗೆ ಹಾನಿ ಮಾಡಿದ ಮಡಿಕೇರಿಯ ಮೂವರನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರೋಹನ್(27), ಕವನ್(28)ಹಾಗೂ ದರ್ಶನ್(31)ಎಂದು ತಿಳಿದುಬಂದಿದೆ. ಮಡಿಕೇರಿಯವರಾದ ಈ ಯುವಕರು ಭಾನುವಾರ ಮಂಗಳೂರಿಗೆ ಬಂದವರು ಮಧ್ಯರಾತ್ರಿ ಕಾರಿನಲ್ಲಿ ವಾಪಾಸು ಮಡಿಕೇರಿಗೆ ಹೊರಟಿದ್ದರು. ಈ ವೇಳೆ ತೋಡಾರಿನ ರಸ್ತೆ ಬದಿಯಲ್ಲಿದ್ದ ಟಿಪ್ಪು ಜಯಂತಿ ಆಚರಣೆಗೆ ಶುಭ ಕೋರುವ ಬ್ಯಾನರ್ ಕಂಡುಬಂದಿತ್ತು. ಕಾರಿನಿಂದಿಳಿದ ಯುವಕರು ಅದಕ್ಕೆ ಹಾನಿ ಮಾಡಿ ಮುಂದೆ ಹೋಗುವುದನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಗಮನಿಸಿ ಕೂಡಲೇ ಕಾರಿನ ನಂಬರನ್ನು ಗಮನಿಸಿ ಬೆಳುವಾಯಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದರು. ಗಸ್ತಿನಲ್ಲಿದ್ದ ಪೊಲೀಸರು ಕಾರನ್ನು ನಿಲ್ಲಿಸಿ ಆರೋಪಿಗಳನ್ನು ಬಂಧಿಸಿದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

By suddi9

Leave a Reply

Your email address will not be published. Required fields are marked *