ನ.15 ಸುರತ್ಕಲ್‍ನಲ್ಲಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮ
ಮಂಗಳೂರು: ರಂಗಚಾವಾಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸಹಯೋಗದಲ್ಲಿ ರಂಗಚಾವಡಿ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ನವಂಬರ್ 15ರಂದು ಭಾನುವಾರ ಸಂಜೆ 5ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ.

ಈ ಬಾರಿಯ ರಂಗ ಚಾವಡಿ ಪ್ರಶಸ್ತಿಯನ್ನು ಕಲಾನಿರ್ದೇಶಕ ತಮ್ಮ ಲಕ್ಷ್ಮಣ್ ಪಡೆಯಲಿದ್ದಾರೆ. ಸಮಾರಂಭವನ್ನು ಕರಾವಳಿ ಕಾಲೇಜ್ ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್‍ರಾವ್ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಲನ ಚಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ತುಳುಸಾಹಿತ್ಯ ಅಕಾಡೆಮಿ ಅಧ್ಯೆಕ್ಷೆ ಜಾನಕಿ ಬ್ರಹ್ಮಾವರ, ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಬಸ್ಸು ಮಾಲಕರ ಸಂಘದ ಉಪಾಧ್ಯಕ್ಷ ಜಯರಾಮ ಶೇಖ, ಅಡ್ಯಾರ್ ಮಾಧವ ನಾಯಕ್, ಅಶೋಕ್ ಶೆಟ್ಟಿ, ಉಲ್ಲಾಸ್ ಆರ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ಮೋಹನ್ ಕೊಪ್ಪಲ, ಸುಧಾಕರ ಪೂಂಜ, ಪ್ರಮೋದ್ ಭಂಡಾರಿ, ಮಂಜುನಾಥ ಸಾಗರ್, ಸತೀಶ್ ಮುಂಚೂರು ಮೊದಲಾದವರು ಭಾಗವಹಿಸಲಿದ್ದಾರೆ. ಬಳಿಕ ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲ್ ಹಾಸ್ಯ ಮನೋರಂಜನೆ ನಡೆಯಲಿದೆ ಎಂದು ರಂಗಚಾವಡಿ ಸಂಘಟನೆಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
