ಮೂಡುಬಿದರೆ: 2013ರಲ್ಲಿ ದಾಖಲಾದ ಚೆಕ್ ಅಮಾನ್ಯ ಕೇಸಿನ ದೋಷಾರೋಪಣೆಯಿಂದ ಆರೋಪಿಯನ್ನು ಖುಲಾಸೆ ಮಾಡಲಾಗಿದೆ.
ಕಿನ್ನಿಗೋಳಿ ಮಾರುಕಟ್ಟೆಯ ಹಿಂದುಗಡೆಯ ನಿವಾಸಿ, ದಿ.ಜಾನ್ ಪೌಲ್ ಡಿ’ಸೋಜ ಅವರ ಪತ್ನಿ ವಿನಿತಾ ಡಿ’ಸೋಜಾ ಅವರು ಮೂಡುಬಿದರೆ ಸಮೀಪದ ಕಲ್ಲಬೆಟ್ಟು ಗ್ರಾಮದ ಸುವರ್ಣ ನಗರದ ಮೌರಿಸ್ ರೆಬೆಲ್ಲೋ ಅವರ ಪುತ್ರ ವಿನ್ಸೆಂಟ್ ರೆಬೆಲ್ಲೋ ಅವರ ಮೇಲೆ ರೂ. 3.50 ಲಕ್ಷದ ಚೆಕ್ ಅಮಾನ್ಯಗೊಂಡಿರುವ ಬಗ್ಗೆ ಮೂಡುಬಿದರೆ ನ್ಯಾಯಾಲಯದಲ್ಲಿ 2013ರಲ್ಲಿ ಕ್ರಿಮಿನಲ್ ದಾವೆ ಹೂಡಿದ್ದರು. ಜಾಗದ ವ್ಯವಹಾರವೇ ಈ ಪ್ರಕರಣದ ಮೂಲವೆಂದು ತಿಳಿದುಬಂದಿದೆ. ಪ್ರಕರಣದ ತನಿಖೆ ನಡೆಸಿದ ನ್ಯಾಯಾಧೀಶರು ವಿನ್ಸೆಂಟ್ ರೆಬೆಲ್ಲೋ ಅವರನ್ನು ಚೆಕ್ ಅಮಾನ್ಯಗೊಂಡ ದೋಷಾರೋಪಣೆಯಿಂದ ಮುಕ್ತಗೊಳಿಸಿದ್ದಾರೆ. ಆರೋಪಿತ ವ್ಯಕ್ತಿಯ ಪರ ವಕೀಲ ಶರತ್ ಡಿ. ಶೆಟ್ಟಿ ವಾದಿಸಿದ್ದರು.

By suddi9

Leave a Reply

Your email address will not be published. Required fields are marked *