ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯ ಸಮಾಜ ಕಾರ್ಯ ವಿಭಾಗ ಮಂಗಳಗಂಗೋತ್ರಿ ಕೊಣಾಜೆ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ, ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ನಾವೂರ, ಎಸ್ಸಿಲೋರ್ ವಿಷನ್ ಪೌಂಡೇಶನ್ ಇಂಡಿಯಾ, ಬೆಂಗಳೂರು, ವೀರಾಂಜನೇಯ ಯುವ ಫ್ರೆಂಡ್ಸ್ ನಾವೂರು ಇದರ ಸಹಕಾರದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಮಕ್ಕಳ ವೈದ್ಯಕೀಯ ತಪಾಸಣೆ ಶಿಬಿರವು ಸರಕಾರಿ ಪ್ರೌಢ ಶಾಲೆ ನಾವೂರದಲ್ಲಿ ನಡೆಯಿತು.
IMG-20151101-WA0009[1]
ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರಿನ ಸಾದ್ವಿ ಶ್ರೀ ಮತಾನಂದಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವವಚನ ನೀಡಿದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯ ಸಮಾಜ ಕಾರ್ಯ ವಿಭಾಗದ ಡಾ. ಪೌಲ್ ಅಕ್ವಿನಸ್, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಮೇಲ್ವಿಚಾರಕ ಸದಾಶಿವ ಆಳಿಕೆ, ನಾವೂರ ವೈದ್ಯಧಿಕಾರಿಗಳಾದ ಡಾ| ರೇವನ್ ಶೆಟ್ಟಿ, ನಾವೂರ ಪಂ. ಅಭಿವೃಧ್ಧಿ ಅಧಿಖಾರಿ ಅಬೂಬಕರ್, ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಚಂದಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರಭಟ್, ಮನೋಹರ್ ಕುಮಾರ್, ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *