ಬಂಟ್ವಾಳ: ಪರೀಕ್ಷೆಗೆಂದು ಮಂಗಳೂರಿಗೆ ತೆರಳಿದ ಮೂಡನಡುಗೋಡು ಗ್ರಾಮದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ದೂರುದಾಖಲಾಗಿದೆ. ಇಲ್ಲಿನ ನೆಲ್ಲಿಗುಡ್ಡೆ ನಿವಾಸಿ ಸೌಮ್ಯ(19) ನಾಪತ್ತೆಯಾದ ಯುವತಿ. ವಾಮದಪದವು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎಂ ವ್ಯಾಸಾಂಗ ಮಾಡುತ್ತಿರುವ ಈಕೆ, ನ.2 ರಂದು ಮಂಗಳೂರಿನಲ್ಲಿ ಪರೀಕ್ಷೆ ಇದೆ ಎಂದು ತನ್ನ ತಾಯಿಯಲ್ಲಿ ಹೇಳಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತೆರಳಿದವಳು ವಾಪಾಸು ಬಂದಿಲ್ಲ ಎಂದು ಆಕೆಯ ತಂದೆ ಮುರುಗೇಶ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
