ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ನೀರುಪಾಲಾದ ವಿವೇಕಾನಂದ ಪೂಜಾರಿಯವರ ತಾಯಿ ಹಾಗೂ ಪತ್ನಿಗೆ ಒಟ್ಟು 10 ಸಾವಿರ ರುಪಾಯಿ ಧನಸಹಾಯವನ್ನು ಬಡ್ಡಕಟ್ಟೆಯ ದೈವಗುಡ್ಡೆ ಫ್ರೆಂಡ್ಸ್ ವತಿಯಿಂದ ನೀಡಲಾಯಿತು. ಭಾನುವಾರ ಬಡ್ಡಕಟ್ಟೆ ನಿತ್ಯಾನಂದ ಭಜನಾ ಮಂದಿರದ ಬಳಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಧನಸಹಾಯವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 255 ವಿದ್ಯಾರ್ಥಿಗಳಿಗೆ 2.5 ಲಕ್ಷಕ್ಕಿಂತಲೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ.

ಈ ಸಂದರ್ಭ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ ಪೂಜಾರಿ, ಪುರಸಭೆ ಉಪಾಧ್ಯಕ್ಷೆ ಯಾಸ್ಮೀನ್, ಸದಸ್ಯರಾದ ಸದಾಶಿವ ಬಂಗೇರಾ, ಗಂಗಾಧರ, ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ವೆಂಕಪ್ಪ ಪೂಜಾರಿ, ಸಂಜೀವ ಬಂಗೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೈವಗುಡ್ಡೆ ಫ್ರೆಂಡ್ಸ್ನ ಮುಖ್ಯಸ್ಥ, ಪುರಸಭೆ ಸದಸ್ಯ ಪ್ರವೀಣ್ ಬಿ., ಪದಾಧಿಕಾರಿಗಳಾದ ಶ್ರೀನಿವಾಸ ಶೆಟ್ಟಿ, ಸಂದೇಶ ಆಚಾರ್ಯ, ತಿಲಕ್ರಾಜ್ ಕಿಣಿ, ಜನಾರ್ದನ ಕುಲಾಲ್, ಪದ್ಮನಾಭ ಸಾಲ್ಯಾನ್, ಪ್ರದೀಪ್, ಸಂಪತ್ತ್ ಮತ್ತಿತರರು ಹಾಜರಿದ್ದರು.
