ಮೂಡುಬಿದರೆ: ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಮಂಗಳವಾರ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ನಡೆಯಿತು. ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಜಿ.ಶ್ರೀಕುಮಾರ್ ಮೆನನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾಫ್ಟವೇರ್ ಕಂಪೆನಿಗಳಿಂದು ಯುವ ಯದ್ಯೋಗಿಗಳನ್ನು ದುಡಿಸುತ್ತಿದೆಯೇ ವಿನಃ ಅವರಲ್ಲಿರುವ ಪ್ರತಿಭೆಗಳಿಗೆ ನೀಡುತ್ತಿಲ್ಲ.
mbd_nov3_2 (3)

mbd_nov3_2 (1)
ತಮ್ಮ ಪ್ರತಿಭೆ, ಸಾಮಥ್ರ್ಯವನ್ನೇ ಸಂಪನ್ಮೂಲವಾಗಿಸಿ ವಿದ್ಯಾರ್ಥಿಗಳು ಸ್ವಸಂಸ್ಥೆಗಳನ್ನು ಸ್ಥಾಪಿಸಬಹುದು. ಪ್ರಾಯೋಗಿಕ ಹಾಗೂ ನೈಜ್ಯ ಚಿಂತನೆ ನಿಮ್ಮನ್ನು ಮುನ್ನಡೆಸುತ್ತದೆ. ಪ್ರಯತ್ನ, ಪರಿಶ್ರಮಗಳ ಜೊತೆ ವ್ಯಕ್ತಿತ್ವ, ಸ್ವದ್ಯೋಗ ಸೃಷ್ಠಿಸುವ ಕಾರ್ಯಾಗಾರ, ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಂದೀಪ್ ಜೆ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ರಘುವೀರ.ಎಚ್, ಮಂಗಳೂರಿನ ಫ್ರೆಂಡ್ಸ್ ವೆನೇರ್ ಎಂಡ್ ಫ್ಲೈ ಸಂಸ್ಥೆಯ ಜಿಎಂ ಪವನಾಂಜಯ ಎನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾರ್ಯಕ್ರಮದ ಸಂಯೋಜಕ ರವಿಕುಮಾರ್ ಆರ್. ಉಪಸ್ಥಿತರಿದ್ದರು.
ನವೀನ್ ಕಜಗಾರ್ ಸ್ವಾಗತಿಸಿದರು. ಅಬ್ದುಲ್ ರೆಹ್ಮಾನ್ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತನಾಡಿದರು. ಶೇಖ್ ಮಹಮ್ಮದ್ ಝಿಶಾನ್ ಹಾಗೂ ಶ್ರೀರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಅಮಲ್ ಚಾಕೋ ವಂದಿಸಿದರು.

By suddi9

Leave a Reply

Your email address will not be published. Required fields are marked *