ಬಂಟ್ವಾಳ : ಡಿ.12ರಿಂದ ಡಿ.19 ವರೆಗೆ ನಡೆಯಲಿರುವ ಅಖಂಡ ಭಜನಾ ಸಪ್ತಾಹ ಮತ್ತು ಧರ್ಮ ಜಾಗರಣಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಆಮಂತ್ರಣ ಪತ್ರವನ್ನು ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
134 (1)ಈ ಸಂದರ್ಭದಲ್ಲಿ ಧಾರ್ಮಿಕ ಮುಂದಾಳು ಕೈಯೂರು ನಾರಾಯಣ ಭಟ್ ರವರು ಸಮಾಜದ ಒಳಿತಿಗಾಗಿ ಹಮ್ಮಿಕೊಳ್ಳಲಾದ ಈ ಶುಭ ಮಂಗಳ ಕಾರ್ಯಕ್ರಮಕ್ಕೆ ಎಲ್ಲರೂ ಸಂಪೂರ್ಣ ಭಾ ಗಿಗಳಾಗಿ ಪ್ರೋತ್ಸಾಹಿಸಬೇಕೆಂದರು. ಭಜನೆಯೊಂದಿಗೆ ವಿವಿಧ ಪೂಜೆಗಳು , ಹೋಮ , ಧಾರ್ಮಿಕ ಸಭೆ , ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ಇದ್ದು ಎಲ್ಲರಿಗೆ ಒಳ್ಳೆದಾಗಲಿ ಎಂದು ಹಾರೈಸಿದರು. ಪದಾಧಿಕಾರಿಗಳಾದ ಸತೀಶ್ ಕುಕ್ಕಾಜೆಬೈಲು , ಗಣೇಶ್ ಆಚಾರ್ಯ, ಶೇಖರ ಡಿ., ನ್ಯಾಯವಾದಿ ರ ವೀಂದ್ರ ಕುಕ್ಕಾಜೆ , ಚಂದ್ರಮೋಹನ್ ಕುಕ್ಕಾಜೆ , ಭಾಸ್ಕರ ಮದನಾಜೆ, ಸತೀಶ್ ಮದನಾಜೆ, ಸಂದೇಶ ಕುಕ್ಕಾಜೆ , ಶ್ರೀ ದೇವಿ ಕೈಯೂರು, ಜಗದೀಶ್ ಹೊಳ್ಳ, ಯೋಗೀಶ್ ನೋಳ, ಜಯಪ್ರಕಾಶ್ ಆಚಾರ್ಯ, ಅರ್ಚಕರಾದ ಶಿವಶಂಕರ್ ಭಟ್, ಸಂದೀಪ್ ಮದನಾಜೆ ಮತ್ತು ಅನೇಕ ಮಂದಿ ಯು ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *