ಮೂಡುಬಿದರೆ: ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಏಳುಮಂದಿ ಪ್ರಮುಖ ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯವು 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಬಳ್ಳಾರಿ ಜೈಲಿಗೆ ಕಳುಹಿಸಲು ಪೊಲೀಸರಿಗೆ ಆದೇಶಿಸಿದೆ.
ಪ್ರಕರಣದಲ್ಲಿ ಒಟ್ಟು ಹತ್ತು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪೈಕಿ ಪ್ರಾಂತ್ಯ ಗ್ರಾಮದ ಮಹಮ್ಮದ್ ಇಲಿಯಾಸ್, ಬಂಟ್ವಾಳದ ಲಿಯಾಕತ್ ಹಾಗೂ ಅಬ್ದುಲ್ ರಶೀದ್ ಅವರನ್ನು ಈ ಹಿಂದೆಯೇ ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. ಉಳಿದ ಆರೋಪಿಗಳಾದ ಬಜ್ಪೆ ಹನೀಫ್, ಮುಸ್ತಫ ಬಜ್ಪೆ, ಮುಸ್ತಫ ಕಾವೂರು, ಕಬೀರ್ ಕಂದಾವರ, ಹನೀಫ್ ತೋಡಾರು, ಬದ್ರುದ್ದೀನ್ ಗಂಟಾಲ್ಕಟ್ಟೆ ಹಾಗೂ ಇಂತಿಯಾಜ್ ಗಂಟಾಲ್ಕಟ್ಟೆ ಅವರಿಗೆ ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿ ಒಪ್ಪಿಸಲಾಗಿತ್ತು. ಶನಿವಾರ ಮತ್ತೆ ಆರೋಪಿಗಳನ್ನು ಮೂಡುಬಿದರೆ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
