ಮೂಡುಬಿದಿರೆ: ಇಲ್ಲಿನ ಬಜರಂಗದಳ ಸಕ್ರಿಯ ಕಾರ್ಯಕರ್ತರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಅನಾಮಧೇಯ ವ್ಯಕ್ತಿ ಜೀವಬೆದರಿಕೆಯೊಡ್ಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಜರಂಗದಳ ಕಾರ್ಯಕರ್ತ, ನಾಟಕ ಕಲಾವಿದರಾಗಿರುವ ತೋಡಾರು ನಿವಾಸಿ ವಿಶ್ವನಾಥ ಶೆಟ್ಟಿ ಅವರ ಮೊಬೈಲ್ಗೆ ಶುಕ್ರವಾರ ತಡರಾತ್ರಿ ಬೆದರಿಕೆ ಕರೆ ಬಂದಿದೆ. ಶುಕ್ರವಾರ್ರ ತಡರಾತ್ರಿ 1.20 ವೇಳೆಗೆ ವಿಶ್ವನಾಥ ಶೆಟ್ಟಿ ಅವರ ಮೊಬೈಲ್ ಸಂಖ್ಯೆಗೆ ಅಂತರ್ಜಾಲ ಸಂಖ್ಯೆ +6744ರ ಮೂಲಕ ಕರೆ ಮಾಡಿ ನೀನು ಬಾರಿ ಹಿಂದೂ ಸಂಘಟನೆಯಲ್ಲಿ ತೊಡಗುತ್ತೀಯಾ?. ಪ್ರಶಾಂತ್ನನ್ನು ಕೊಲೆ ಮಾಡಿದವರು ನಾವೆ. ದನ ಸಾಗಾಟ ಮಾಡುವಾಗ ತಡೆದು ನಿಲ್ಲಿಸುತ್ತೀಯಾ? ನಿನ್ನನ್ನು ಮುಂದಿನ ದಿನದಲ್ಲಿ ಕೊಚ್ಚಿ ಕೊಂದು ಹಾಕುವುದೇ ನನ್ನ ಮೊದಲ ಟಾರ್ಗೆಟ್ ಎಂದು ಅವಾಚ್ಯ ಶಬ್ದಗಳಿಂದ ಜೀವಬೆದರಿಕೆಯೊಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಶ್ವನಾಥ ದೂರಿನ ಜೊತೆ ಬೆದರಿಕೆ ಕರೆಯ ವಾಯ್ಸ್ ರೆಕಾರ್ಡ್ ಅನ್ನು ಪೊಲೀಸರಿಗೆ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *