ಮಂಗಳೂರು: ಬಂಟ್ವಾಳ ತಾಲೂಕಿನ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನ್ಯಾಯವಾದಿ ವಿನಯನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ತುಳು ಚಲನಚಿತ್ರ ಪನೊಡಾ ಬೊಡ್ಚಾ ಇದರ ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ಚಿತ್ರದ ನಿರ್ಮಾಪಕ ವಿನಯ ನಾಯಕ್ ಪಚ್ಚಾಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.352A5155

 

352A6541

panod 1

ಪ್ರಥಮ ಹಂತದಲ್ಲಿ ಮುತ್ತಪ್ಪ ರೈ ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್ನಲ್ಲಿ 12 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಎರಡನೇ ಹಂತದ ಚಿತ್ರೀಕರಣ ಅಕ್ಟೋಬರ್ 1ರಿಂದ 18 ದಿನಗಳ ಕಾಲ ಬಂಟ್ವಾಳ ಮತ್ತು ಬಿ.ಸಿ.ರೋಡ್ ಸುತ್ತಮುತ್ತ ನಡೆಯಿತು. ಸೂರಿಕುಮೇರ್ ಬಳಿಯ ಕಾಗೆಕಾನ ಮತ್ತು ಮಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ. ಒಟ್ಟು ಚಿತ್ರದಲ್ಲಿ ಒಂದು ಐಟಂ ಸಾಂಗ್ ಸಹಿತ 4 ಹಾಡುಗಳಿದ್ದು ಕಡಲಮಗೆ ಖ್ಯಾತಿಯ ಚಂದ್ರಕಾಂತ ಶೆಟ್ಟಿ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ನೀಡಿದ್ದಾರೆ.

ಸಂತೋಷ್ ರೈ ಪಾತಾಜೆ ಅವರು ಡ್ರ್ಯಾಗನ್ ಕ್ಯಾಮರಾ ಬಳಸಿ ಚಿತ್ರೀಕರಣ ನಡೆಸಿದ್ದು ಅತ್ಯುತ್ತಮ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ. ಗ್ರಾಮೀಣ ಸೊಗಡಿನ ಕೌಟುಂಬಿಕ ಕಥಾಹಂದರವಿರುವ ಚಿತ್ರದಲ್ಲಿ ಉತ್ತಮ ಹಾಸ್ಯವಿದೆ. ಊರಿನ ಸಮಸ್ಯೆಗಳನ್ನು ಬಗೆಹರಿಸುವ ನಾಯಕನ ಸುತ್ತ ಕಥೆಯಿದ್ದು ಸೆಂಟಿಮೆಂಟ್ಸ್ ಜೊತೆ ನವಿರಾದ ಹಾಸ್ಯವಿದೆ. ಒಟ್ಟಿನಲ್ಲಿ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರವಾಗಿದ್ದು ಶಿವಧ್ವಜ್, ಹರೀಶ್ ರಾಯ್, ವಿನಯ ಪ್ರಸಾದ್, ಕಿಶೋರ್ ಡಿ.ಶೆಟ್ಟಿ, ಶಕುಂತಳಾ, ಸೀತಾಕೋಟೆ, ಇಳಾ ವಿಟ್ಲಾ, ಯೋಗೀಶ್ ಆಚಾರ್ಯ , ಚೇತನ್ ರೈ ಮಾಣಿ, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸುಂದರ ರೈ ಮಂದಾರ, ಉಮೇಶ್ ಮಿಜಾರ್, ಸತೀಶ್ ಅಮೀನ್ ಕಲ್ಲಮುಂಡ್ಕೂರು, ಚಂದ್ರಹಾಸ ಶೆಟ್ಟಿ ಮಾಣಿ, ರವಿ ಕುಮಾರ್ ಸುರತ್ಕಲ್ , ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು, ಗಿರೀಶ್ ಶೆಟ್ಟಿ, ಎಚ್ಕೆ ನಯನಾಡು, ರಶ್ಮಿಕಾ , ಅಭಿಲಾಷ, ಬೇಬಿ ತೀರ್ಥ ಪೊಳಲಿ, ಬೇಬಿ ಹವ್ಯಾ ನಾರಾಯಣ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಶರಣ್ ಪಂಪ್ವೆಲ್ ಮತ್ತು ರಮೇಶ್ ನಾಯಕ್ ರಾಯಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈಗಾಗಲೆ ಹಲವಾರು ಚಿತ್ರಕ್ಕೆ ತಂತ್ರಜ್ಞರಾಗಿ ದುಡಿದಿರುವ ಮಧು ಸುರತ್ಕಲ್ ಚಿತ್ರ ನಿರ್ದೇಶಿಸಿದ್ದಾರೆ. ಸುಂದರ ರೈ ಮಂದಾರ ಅವರ ಕಥೆ ಚಿತ್ರಕಥೆ ಸಂಭಾಷಣೆ ನಿರ್ಮಾಣ, ಎಚ್ಕೆ ನಯನಾಡು, ಮಧು ಸುರತ್ಕಲ್ ಅವರ ಸಾಹಿತ್ಯವಿದೆ. ಕೇಶವ ಸುವರ್ಣ ಅವರ ಕಲಾ ನಿರ್ದೇಶನವಿದೆ. ಮೇಕಪ್ ರಮಣ ಚೆನ್ನೈ, ಸ್ಥಿರಚಿತ್ರ ಶ್ರೀನಿ, ಧ್ವನಿಗ್ರಗಣ, ಸಂಕಲನ ಚಾಮುಂಡೇಶ್ವರಿ ಸ್ಟುಡಿಯೋ, ಗಣೇಶ್ ಶೆಟ್ಟಿ ಸುಧೆಕಾರ್, ಚಂದ್ರಹಾಸ ಶೆಟ್ಟಿ, ಎಚ್ಕೆ ನಯನಾಡು ಕಾರ್ಯಕಾರಿ ನಿರ್ಮಾಪಕರಾಗಿದ್ದು, ರಾಕೇಶ್ ನಿರ್ಮಾಣ ಸಹಾಯಕರಾಗಿದ್ದಾರೆ. ಶಂಕರ್ ಸುಳ್ಯ- ಪ್ರೊಡಕ್ಷನ್ಮ್ಯಾನೇಜರ್, ಸಚಿನ್ ಶೆಟ್ಟಿ ಕುಂಬ್ಳೆ, ಪ್ರಶಾಂತ್ ಆಳ್ವ ಕಲ್ಲಡ್ಕ, ಪುನೀತ್ ತೀರ್ಥಹಳ್ಳಿ, ಸಂದೀಪ್ ಮೂಡಬಿದಿರೆ ಅವರ ಸಹನಿರ್ದಶನವಿದೆ. ಶ್ರೀನಿವಾಸ ಪಿ.ಬಾಬು ಅವರ ಸಂಕಲನವಿದೆ. ಮುಂದಿನ ಹಂತದಲ್ಲಿ ಎಡಿಟಿಂಗ್ ಮತ್ತು ಡಬ್ಬಿಂಗ್ ಕಾರ್ಯ ನಡೆಯಲಿದ್ದು ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೆಶಕ ಮಧು ಸುರತ್ಕಲ್, ಕಿಶೋರ್ ಡಿ.ಶೆಟ್ಟಿ ನವೀನ್ ಡಿ.ಪಡೀಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *