ಬಂಟ್ವಾಳ, ಅ. 27: ಬಿ.ಸಿ.ರೋಡ್ ಫ್ಲೈಒವರ್ ತಳಭಾಗದಲ್ಲಿ ಅ. 31ರಂದು ಬೆಳಿಗ್ಗೆ 10ಗಂಟೆಗೆ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ಜೋಡುಮಾರ್ಗ ಆಶ್ರಯದಲ್ಲಿ ನೇತ್ರಾವತಿ ನದಿ ತಿರುವು ಎತ್ತಿನ ಹೊಳೆ ಯೋಜನೆ ನಿಲುಗಡೆ ಒತ್ತಾಯಿಸಿ ಸಹಸ್ರಾರು ಮಂದಿಯಿಂದ ಮುಖ್ಯಮಂತ್ರಿಗಳಿಗೆ ಅಂಚೆಕಾರ್ಡ್ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯಕಾರಿ ಸದಸ್ಯ ಬಿ.ಎಂ. ಪ್ರಭಾಕರ ದೈವಗುಡ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚಳವಳಿಯಲ್ಲಿ ಅಜಿಲಮೊಗರು ಜುಮ್ಮಾ ಮಸೀದಿ ಖತೀಬ ಅಬ್ದುಲ್ ರಹಿಮಾನ್, ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ಮೊಡಂಕಾಪು ಧರ್ಮಗುರು ಮ್ಯಾಕ್ಸಿಮ್ ನೊರೊನ್ಹಾ, ಸಮಿತಿ ಗೌ| ಅಧ್ಯಕ್ಷ ಲೋಕೇಶ್ ನಾಂತಿ ಯಂ.ಕೆ ಭಾಗವಹಿಸಲಿದ್ದಾರೆ.
ನದಿಯ ಪಾತ್ರವನ್ನು ಉಳಿಸಲು ಜಾತಿ ಮತ ಪಂಥವನ್ನು ಮೀರಿ,ಮುಂದಿನ ಪೀಳಿಗೆಗೆ ಈ ಸಂಪತ್ತನ್ನು ಉಳಿಕೊಡಲು ಎಲ್ಲರೂ ಕೈಜೋಡಿಸಲು ವಿನಂತಿಸಿದೆ.

By suddi9

Leave a Reply

Your email address will not be published. Required fields are marked *