ಇರುವೈಲ್: ಮೂಡಬಿದ್ರೆ ಸಮೀಪದ ಇರುವೈಲ್ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇರುವೈಲ್ ಪುಚ್ಚಮೊಗೆರ್ ಇಲ್ಲಿಯ ಶಾಲಾಬಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ನಿರ್ಮಿಸಲು ಅ. 26ರಂದು ಸೋಮವಾರ ಗುರುಮಂದಿರಕ್ಕೆ ಶಿಲಾನ್ಯಾಸ ನೆರವೇರಿತು.
ಮೂಡಬಿದ್ರೆ ನಾರಾಯಣ ಗುರುಮಂದಿರದ ಶಿವಾನಂದ ಶಾಂತಿ ಅವರು ಭೂಮಿ ಪೂಜೆ ನೆರವೇರಿಸಿ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಲ್ಲವ ಸೇವಾ ಸಂಘದ ಗೌರವಧ್ಯಕ್ಷ ಹೈಕೋರ್ಟ್ ವಕೀಲರಾದ ತಾರನಾಥ ಪೂಜಾರಿ, ಅಧ್ಯಕ್ಷ ಕುಮಾರ್ ಪೂಜಾರಿ,ಕಟ್ಟಡ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಸಾಲಿಯಾನ್ ಪಾಣಿಲ, ಮುತ್ತಪ್ಪ ಸಾಲಿಯಾನ್ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘದ ಸದಸ್ಯರು ಉಪಸ್ಥಿತರಿದ್ದರು. ಹರೀಶ ಬಂಗೇರಾ ಸ್ವಾಗತಿಸಿ ರಾಜೇಶ್ ಪೂಜಾರಿ ಕಾಳೂರು ಧನ್ಯವಾದವಿತ್ತರು.




