ಬಂಟ್ವಾಳ, ಎ. 22: ಕೆಲಸ ಮಾಡಲು ಕೈಯಲ್ಲಿ ಶಕ್ತಿಯಿಲ್ಲ, ತಂಗಿಯ ಅರೋಗ್ಯ ನೋಡಿಕೊಳ್ಳಲು ಕಿಸೆಯಲ್ಲಿ ಹಣವಿಲ್ಲ, ಉಳಿದುಕೊಳ್ಳು ಸ್ವಂತ ಸೂರಿಲ್ಲ, ಒಂದೊತ್ತು ಸರಿಯಾಗಿ ಊಟ ಮಾಡಲು ಅಕ್ಕಿಯಿಲ್ಲ, ಕೇಳುವವರು ಎನ್ನುವವರು ತನ್ನ ಪಾಡಿಗೆ ಯಾರೂ ಇಲ್ಲ, ಹಬ್ಬ ಹರಿದಿನಗಳ ಖುಷಿ ಇಲ್ಲ, ಮದುವೆ ,ಜಾತ್ರೆ, ಇನ್ನಿತರ ಕಾರ್ಯಕ್ರಮಗಳು ಗೊತ್ತಿಲ್ಲ ಹೀಗೆ 5ವರ್ಷದಿಂದ ಜೀವನದಲ್ಲಿ ಹೇಳಲು ನನ್ನಲ್ಲಿ ಬೇರೇನೂ ಇಲ್ಲ ಎಂದು ಕಣ್ಣೀರು ಸುರಿಸಿ ವೈರಾಗ್ಯದ ಜೀವನವನ್ನು ವಿವರಿಸಿದ್ದು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೋಳಂಗಡಿ ನಿವಾಸಿ ವಿಕಲಾಂಗ ಕೃಷ್ಣಪ್ಪ ಆಚಾರ್ಯ .ಈ ಮನೆಯಂತಿರುವ ಗುಡಿಸಲಿನಲ್ಲಿ ಮೂರು ಮಂದಿ ವಾಸವಾಗಿದ್ದಾರೆ. ಮೂರು ಮಂದಿ ಕೂಡ ರೋಗಿಗಳಾಗಿ ಬಳಲುತ್ತಿರುವುದು ಕಲ್ಲಿನಂತ ಹೃದಯವನ್ನು ಕೂಡಾ ಕರಗಿಸುತ್ತದೆ.ಒಂದೇ ಕುಟುಂಬದ ಮೂವರು ಯಾವುದೇ ಔಷಧಿಗೆ ಗುಣಕಾಣದ, ನಿತ್ಯವೂ ನೋವಿನಿಂದಬಳಲುತ್ತಿದ್ದಾರೆ.ಎದ್ದು ನಿಲ್ಲಲು ಸಾಧ್ಯವಿಲ್ಲದ, ನಿಂತರೆ ಕುಳಿತಿರಲಾಗದ, ಮಲಗಿದರೆ ಏಳಲಾಗದ, ಎದ್ದರೆ ಆಚೀಚೆ ಹೊರಳಾಡಲಾಗದ, ಎದ್ದರೂ ನಡೆಯಲಾಗದ, ಹೆಜ್ಜೆ ಇಡಲಾಗದ, ಯಾರದಾದರೂ ಆಸರೆ ಇಲ್ಲದೆ ಮಿಸುಕಾಡಲಾಗದ ಕುಟುಂಬವೊಂದು ನಿತ್ಯವೂ ಬೇನೆ ಅನುಭವಿಸುತ್ತಿದೆ.

ಕುಟುಂಬ ಹಿರಿಯ ಮಹಿಳೆ ಗಿರಿಜ ಆಚಾರ್ತಿ[ 60) ಅವರಿಗೆ ಒಬ್ಬ ಪುತ್ರ , ಇನ್ನೊಬ್ಬಳು ಪುತ್ರಿ ಇದೊಂದು ಕುಟುಂಬ.
ಗಿರಿಜ ಆಚಾರ್ತಿ ಯವರು ಗಂಡ ಬದುಕಿದ್ದಾಗ ಎಲ್ಲವೂ ಸರಿ ಇತ್ತು. ಗಂಡನ ಸಾವಿನ ಬಳಿಕ ಕುಟುಂಬದ ಹೊಣೆ ಹೆಗಲಮೇಲೆ ಬಿತ್ತು.
ಕೂಲಿ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಕೂಲಿಯಿಂದಲೇ ಕುಟುಂಬ ಬದುಕುತ್ತಿತ್ತು.
ಆದರೆ ಯಾವುದೋ ಕಾರಣಕ್ಕೆ ಅವರಿಗೆ ದೈಹಿಕ ಬೇನೆ ಆರಂಭವಾಯಿತು. ನಿತ್ಯವೂ ಬಾದಿಸುತ್ತಿರುವ ದೈಹಿಕ ನೋವು ಕೆಲವು ವರ್ಷಗಳಿಂದ ಹಿಂಡಿ ಹಿಪ್ಪೆ ಮಾಡಿದೆ. ಕೂಲಿ ಕೆಲಸಕ್ಕೆ ಹೋದಂತೆ ಮಾಡಿದೆ.
ದುಡಿಯಲು ಸಾಧ್ಯವಿಲ್ಲದ ಸ್ಥಿತಿಗೆ ನೂಕಿದೆ. ಮೊದಲೇ ಬಡತನದ ಕುಟುಂಬಕ್ಕೆ ಹಿರಿಯ ಮಹಿಳೆಯು ದುಡಿಯಲು ಸಾಧ್ಯವಾಗದ ಸ್ಥಿತಿ ಕುಟುಂಬವನ್ನು ಕಂಗಾಲಾಗಿಸಿದೆ.
ಕುಟುಂಬಕ್ಕೆ ಆಧಾರ ಆಗಬೇಕಿದ್ದ ಪುತ್ರ ಕೃಷ್ಣಪ್ಪ ಆಚಾರ್ಯ (38) ಹುಟ್ಟು ಅಂಗವಿಕಲ, ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಅವರು ಕೂಡಾ ದೈಹಿಕವಾಗಿ ಕೃಷರಾಗುತ್ತಾ ನೋವಿನ ಭಾದೆಯಿಂದ ಕಂಗೆಟ್ಟಿದ್ದಾರೆ.
ಪುತ್ರಿ ಬೇಬಿ (36) ಬೀಡಿ ಲೆಬಲ್ ಕೆಲಸ ಮಾಡುತ್ತಿದ್ದರು. ಜೀವ ತುಂಬಿಕೊಂಡು, ಕುಟುಂಬಕ್ಕೆ ಆಧಾರವಾಗಿದ್ದ ಈ ಹೆಣ್ಣು ಮಗಳಿಗೆ ಎರಡು ವರ್ಷದ ಹಿಂದೆ ಹೃದಯ ಖಾಯಿಲೆಗೆ ತುತ್ತಾದರು.
ಮೂವರು ಕೂಡಾ ಈಗ ಪ್ರಾಣ ಹಿಡಿದುಕೊಂಡಿರುವ ದೇಹದಂತೆ, ಉಸಿರಾಡುತ್ತಿರುವ ಮಾನವರಷ್ಟೆ ಎಂಬ ಸ್ಥಿತಿಯಲ್ಲಿದ್ದಾರೆ.
ಬೇಬಿ ಅವರ ಹೃದಯ ಶಸ್ತ್ರಚಿಕಿತ್ಸೆಗಾಗಿ ಬೀಡಿ ಪಾಸ್ ಪುಸ್ತಕದ ಮೂಲಕ ಪಡೆದ ಆಥರ್ಿಕ ನೆರವಿನಿಂದ ವೆಚ್ಚವನ್ನು ಭರಿಸಲಾಗಿದೆ.
ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಆದರೆ ಅದರ ಬಳಿಕ ಪಾಶ್ರ್ವವಾಯು ಪೀಡಿತರಿರಾಗಿ ಹಾಸಿಗೆ ಹಿಡಿದಿರುತ್ತಾರೆ. ಈಗ ಅವರನ್ನು ಎತ್ತಿಕೊಂಡು ಹೋಗಲು ಒಬ್ಬರು ವ್ಯಕ್ತಿ ಬೇಕು ಎಂಬ ಸ್ಥಿತಿಗೆ ಮುಟ್ಟಿದ್ದಾರೆ.
ಗಿರಿಜ ಆಚಾರ್ತಿ ಯವರು ಕೂಡ ನರದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಾಗಿದ್ದಾರೆ., ಆಸ್ಪತ್ರೆಯಲ್ಲಿ ತುಂಬಾ ವೆಚ್ಚವಾಗಿದೆ. ಕುಟುಂಬದಲ್ಲಿ ಎಲ್ಲರಿಗೂ ಸಮಸ್ಯೆ ಇರುವುದರಿಂದ ನೋಡಿಕೊಳ್ಳಲು ಯಾರು ಇಲ್ಲ.
ಇವರಿಗೆ ತುತ್ತು ಅನ್ನಕ್ಕೂ ಗತಿ ಇಲ್ಲ ಪರದಾಡುವ ಸ್ಥಿತಿ ಬಂದಿದೆ. ಈ ಕುಟುಂಬವು ತುಂಬಾ ಹೀನಾಯ ಸ್ಥಿತಿಯಲ್ಲಿ ಇದೆ.
ಗ್ರಾಮಾಭಿವೃದ್ದಿ ನೆರವು
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪಾಣೆಮಂಗಳೂರು ಒಕ್ಕೂಟದ ಸದಸ್ಯರಾಗಿದ್ದ ಮಹಿಳೆಗೆ ಯೋಜನೆಯ ವತಿಯಿಂದ ತಿಂಗಳಿಗೆ 500 ರೂ. ಮಾಸಾಸನ ಕುಟುಂಬದ ನಿರ್ವಹಣೆಗೆ ನೀಡಲಾಗುತ್ತಿದೆ.
ಆದರೆ ಅವರ ದೈನೇಸಿ ಸ್ಥಿತಿಯಲ್ಲಿ ಇದು ಬಾಯಾರಿದವನಿಗೆ ಒಂದು ಗುಟುಕು ನೀರಿನಷ್ಟು ಎಂಬಂತಾಗಿದೆ.
ಹಾಗೂ ಬೇಬಿಯವರಿಗೆ ಹೃದಯ ಚಿಕಿತ್ಸೆಗಾಗಿ ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ 5ಸಾವಿರ ಮತ್ತು ಸಾಮಾಜಿಕ ಕಾರ್ಯಕರ್ತ ನರಿಕೊಂಬು ನಿವಾಸಿ ಪ್ರಕಾಶ್ ಕಾರಂತ್ ಒಂದಷ್ಟು ನೆರವು ನೀಡಿದ್ದಾರೆ.
ಅವರ ನೆರೆ ಮನೆಯ ವ್ಯಕ್ತಿ ಪುತ್ತೂರಿನಲ್ಲಿ ಹಣ್ಣು ಹಂಪಲು ವ್ಯಾಪಾರ ಮಾಡುತ್ತಿರುವ ಮಹಮ್ಮದ್ ಎಂಬವರು ಈ ರೋಗಿ ಕುಂಟುಂಬದ ಸದಸ್ಯರನ್ನು ಆಸ್ಪತ್ರೆಗೆ ಸೇರ್ಪಡೆ ಮಾಡಿ ಚಿಕಿತ್ಸೆ ಕೊಡಿಸುವ ನೆರವು ನೀಡಿದ್ದಾರೆ.
ಅವರೇನು ಶ್ರೀಮಂತರಲ್ಲ. ಆದರೆ ಕುಟುಂಬದ ಸ್ಥಿತಿಯನ್ನು ಕಣ್ಣಾರೆ ಕಾಣಲಾಗದೆ. ನೆರೆ ಮನೆಯ ಸದಸ್ಯರ ಅನಾರೋಗ್ಯವನ್ನು, ಕೂಗನ್ನು ಕೇಳಲಾಗದೆ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಒಬ್ಬರೇ ಇನ್ನಷ್ಟು ನೆರವು ನೀಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ, ಸಮಾಜದ ಸಹೃದಯಿ ವ್ಯಕ್ತಿಗಳು, ಸಂಘಟನೆಗಳು, ದಾನಿಗಳು ಅವರ ರೋಗ ನಿವಾರಣೆ ಚಿಕಿತ್ಸೆಗಾಗಿ ಸಾಧ್ಯ ಇರುವ ನೆರವು ನೀಡಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.
ಇವರ ಕಾರ್ಫೊರೇಶನ್ ಬ್ಯಾಂಕ್ ಚಕ್ಚ ಘೆಟ :0200/ಖಆ/01/006728 ಖಾತೆಗೆ ತಾವು ಉದಾರ ಮನಸ್ಸು ಮಾಡಿ ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.




