ಬಂಟ್ವಾಳ; ನಿಷೇಧಿಯ ಗಾಂಜಾ ಹಾಗೂ ಪಾಪಿಗಿಡಗಳನ್ನು ಅಕ್ರಮವಾಗಿ ಬೆಳೆಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗಡಿಲೈನ್, ಕೋಡೆಕಲ್ಲು, ಸೂಜಿಕಲ್ಲು, ಆನೆಗುಂಡಿ, ಬಿದಿರು ತಳ ಹಾಗೂ ಜೇನು ಕಲು ಮೊದಲಾದ ಪ್ರದೇಶಗಳಿಗೆ ಅಬಕಾರಿ ಇಲಾಖೆಯ ಬಂಟ್ವಾಳ ಉಪವಿಭಾಗ , ಬಂಟ್ವಾಳ ವಲಯ ಹಾಘೂ ಬೆಳ್ತಂಗಡಿ ವಲಯದ ಅಧಿಕಾರಿಗಳು ಬುಧವಾರ ದಾಳಿನಡೆಸಿ ಪರಿಶೀಲನೆ ನಡೆಸಿದ್ದಾರೆ.
ದಾಳಿ ಸಂದರ್ಭ ಯಾವುದೇ ಅಕ್ರಮ ಗಳು ಪತ್ತೆಯಾಗಿಲ್ಲ. ಜಿಲ್ಲಾಧಿಕಾರಿಯವರ ಆದೇಶದಂತೆ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ಹಾಗೂ ಅಬಕಾರಿ ಇಲಾಖೆಯ ಡೆಪ್ಯೂಟಿ ಕಮೀಷನರ್ ರವರ ಮಾರ್ಗದರ್ಶನದಂತೆ ಈ ದಾಳಿ ನಡೆಸಲಾಗಿದ್ದು, ಕಾರ್ಯಚರಣೆಯನ್ನು ಮುಂದೆಯೂ ತೀವ್ರಗೊಳಿಸಿ, ಅಕ್ರಮ ಚಟುವಟಿಕೆ ನಡೆಸಿದವರಿಗೆ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
ಮಾದಕದ್ರವ್ಯ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಗಾಂಜಾ ಹಾಗೂ ಪಾಪಿ ಗಿಡಗಳನ್ನು ಬೆಳೆಸುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಅಬಕಾರಿ ಉಪನಿರೀಕ್ಷಕರ ಕಛೇರಿ ಬಂಟ್ವಾಳ(08255-231595), ಅಬಕಾರಿ ನಿರೀಕ್ಷಕರ ಕಛೇರಿ ಬಂಟ್ವಾಳ(08255-232726) ಮತ್ತು ಅಬಕಾರಿ ನಿರೀಕ್ಷಕರ ಕಛೇರಿ ಬೆಳ್ತಂಗಡಿ ವಲಯ(08256-234757) ಯನ್ನು ಸಂಪಕರ್ಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ
