ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಶಾರದೋತ್ಸವ ಸಮಿತಿ ಹೆಸರಿನಲ್ಲಿ ಕಳೆದ ವರ್ಷ ಒಂದೇ ಪರಿಸರದಲ್ಲಿ ಎರಡೆರಡು ಶಾರದೋತ್ಸವ ಆಚರಿಸಿ ಭಕ್ತರಲ್ಲಿ ಗೊಂದಲ ಮೂಡಿಸಿದ್ದ ಉತ್ಸವ ಈ ಬಾರಿ ಮತ್ತೆ ಎರಡೂ ಸಮಿತಿ ಒಟ್ಟಾಗಿ ಒಂದೇ ಕಡೆ ‘ಶಾರದೋತ್ಸವ’ ಆಚರಿಸುವ ಮೂಲಕ ಭಕ್ತರಲ್ಲಿ ಸಂತಸ ಮೂಡಿಸಿದೆ.
21btl-Koila (1)ಕಳೆದ 13ವರ್ಷಗಳ ಹಿಂದೆ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ಆರಂಭಗೊಂಡ ಶಾರದೋತ್ಸವವು ಕೆಲವೊಂದು ವ್ಯಕ್ತಿಗಳ ಸ್ವಹಿತಾಸಕ್ತಿ ಮತ್ತು ಕಾಂಗ್ರೆಸ್-ಬಿಜೆಪಿ ರಾಜಕೀಯ ನೆಪದಲ್ಲಿ ಇಲ್ಲಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಕಳೆದ ವರ್ಷ ಒಂದೇ ಪರಿಸರದಲ್ಲಿ ಎರಡೆರಡು ಪ್ರತ್ಯೇಕ ವೇದಿಕೆಯಲ್ಲಿ 12ನೇ ವರ್ಷದ ಶಾರದೋತ್ಸವ ನಡೆಸಲಾಗಿತ್ತು. ಇದಕ್ಕೂ ಮೊದಲು ಕೆಲವೊಂದು ಸಮಿತಿ ಸದಸ್ಯರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯದಿಂದ ರಾಯಿ ಪೇಟೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆರಂಭಿಸಲಾಗಿತ್ತು. ಕಳೆದ ವರ್ಷ ನಡೆದ ಒಂದು ಶಾರದೋತ್ಸವದ ಧಾರ್ಮಿಕ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಆರ್‍ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಮತ್ತಿತರರು ಭಾಗವಹಿಸಿ ಭಾಷಣ ಮಾಡಿದ್ದರೆ, ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಆಗಮಿಸಿದ್ದರು.
ಈ ಬಾರಿ ಎರಡೂ ಸಮಿತಿಗಳು ಒಟ್ಟಾಗಿ ಅದ್ದೂರಿ 13ನೇ ವರ್ಷದ ಶಾರದೋತ್ಸವ ಆಚರಿಸುತ್ತಿದ್ದು, ಬುಧವಾರ ಬೆಳಿಗ್ಗೆ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಗುರುವಾರ ರಾತ್ರಿ ವೈಭವದ ಶೋಭಾಯಾತ್ರೆ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

By Suddi9

Leave a Reply

Your email address will not be published. Required fields are marked *