ಬಂಟ್ವಾಳ: ಧಾರ್ಮಿಕತೆಯಿಂದ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಬೆಳೆÉದು ಸಂಘಟಿತ ಮತ್ತು ಸುಸಂಸ್ಕøತ ಮನೋಭಾವ ಬೆಳೆಯಬೇಕು ಎಂದು ಬಿ.ಸಿ.ರೋಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ ಭಟ್ ಅಜೆಕ್ಕಳ ಹೇಳಿದ್ದಾರೆ.

20btl-vamadpadv
ಬಂಟ್ವಾಳ ತಾಲ್ಲೂಕಿನ ವಾಮದಪದವಿನಲ್ಲಿ ಸೋಮವಾರ ರಾತ್ರಿ ನಡೆದ ಶಾರದೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಿಂಗಾಪುರ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಗೌರವ ಪುರಸ್ಕøತ ಉದ್ಯಮಿ ವರದರಾಜ ಪೈ ಇವರನ್ನು ಸನ್ಮಾನಿಸಿದರು.
ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಕಾವಳಪÀಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ ಶೆಟ್ಟಿ, ಮಾಜಿ ಸದಸ್ಯ ಶ್ರೀಧರ ಜಿ.ಪೈ, ವೈದ್ಯಾಧಿಕಾರಿ ಡಾ.ದುರ್ಗಾಪ್ರಸಾದ್, ಕೆನರಾ ಬ್ಯಾಂಕಿನ ಶಾಖಾಧಿಕಾರಿ ಅನಿಲ್ ಕುಮಾರ್, ಜಯಚಂದ್ರ ಬೊಳ್ಮಾರು ಮತ್ತಿತರರು ಇದ್ದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಸ್ವಾಗತಿಸಿ, ಭರತ್ ಕುಮಾರ್ ಜೈನ್ ವಂದಿಸಿದು. ರಾಜು ಕಕ್ಯಪದವು ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *