ಬಂಟ್ವಾಳ, ಅ. 16: ಕ್ಷೇತ್ರ ಶಿಕ್ಷಣಾಕಾರಿಗಳ ಕಛೇರಿ ಬಂಟ್ವಾಳ ಹಾಗೂ ಸರಕಾರಿ ಪ್ರೌಢಶಾಲೆ ಗೋಳ್ತಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ 2015-16ನೇ ಶೈಕ್ಷಣಿಕ ವರ್ಷದ ಪ್ರಥಮ ಸಮುದಾಯದತ್ತ ಶಾಲಾ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಗೋಳ್ತಮಜಲಿನಲ್ಲಿ ಜರಗಿತು. ಗೋಳ್ತಮಜಲು ಗ್ರಾ.ಪಂ.ಸದಸ್ಯ ಶೇಖರ ಕೊಟ್ಟಾರಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯ ಹಮೀದ್ ಗೋಳ್ತಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಾಳ್ತಿಲ ಆರೋಗ್ಯ ಕ್ಷೇಂದ್ರದ ವೈದ್ಯಾಕಾರಿ ಡಾ|ವಿಶ್ವೇಶ್ವರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸರಕಾರದ ಸಿಗುವ ಸವಲತ್ತು ಮತ್ತು ಡೆಂಗ್ಯು, ಮಲೇರಿಯಾ, ಇಲಿಜ್ವರ, ಹಂದಿಜ್ವರ, ಮುಂತಾದ ರೋಗಗಳು ಹರಡುವ ಕಾರಣಗಳು, ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕತರ್ೆ ರೋಹಿಣಿ, ಆಶಾ ಕಾರ್ಯಕತರ್ೆ ನಳಿನಿ, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳ ಪೊಷಕರು, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಜಯಕುಮಾರ ಎಸ್.ಎನ್.ಸ್ವಾಗತಿಸಿ, ಶಿಕ್ಷಕಿ ಮಾಗ್ನೆಡ್ ಡಿ’ಸೋಜ ವಂದಿಸಿ, ಚಿತ್ರಕಾಲಾ ಶಿಕ್ಷಕ ಸುಂದರ ತೋಡಾರ್ ಕಾರ್ಯಕ್ರಮ ನಿರ್ವಹಿಸಿದರು.
1610ಛಣಜಠಿ6

