ಬಂಟ್ವಾಳ, ಅ. 16: ವೃತ್ತಿ ಕ್ಷೇತ್ರದ ಕೌಶಲ್ಯಕ್ಕಾಗಿ ಅಮೆರಿಕದ ಯುರೋಪಿಯನ್ ಕಾಂಟಿನೆಂಟರ್ ಯುನಿವರ್ಸಿಟಿಯಿಂದ ಸಿಂಗಾಪುರದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಯಜಮಾನ ಡಾ| ವರದರಾಜ್ ಪೈ ಅವರನ್ನು ಅ. 15ರಂದು ಮಾವಿನಕಟ್ಟೆಯಲ್ಲಿ ಸಮ್ಮಾನಿಸಲಾಯಿತು.
ಶ್ರೀ ಲಕ್ಷ್ಮೀವೆಂಕಟರಮಣ ಯಜಮಾನ ಇಂಡಸ್ಟ್ರೀಸ್, ಶ್ರೀ ಲಕ್ಷ್ಮೀವೆಂಕಟರಮಣ ಕ್ಯಾಶ್ಯೂ ರೂರಲ್ ಇಂಡಸ್ಟ್ರೀಸ್ ಮಾವಿನಕಟ್ಟೆ, ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ ನಯನಾಡು, ವಿಷ್ಣುಪ್ರಿಯ ಕ್ಯಾಶ್ಯೂ ಇಂಡಸ್ಟ್ರೀಸ್ ವಗ್ಗ, ಪವಮಾನ ಇಂಡಸ್ಟ್ರೀಸ್ ಮಾವಿನಕಟ್ಟೆ, ವಿಷ್ಣು ಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್ ಪೂಂಜ, ಎಸ್ಎಲ್ವಿ ಸೂರ್ಯ ಟೆಕ್ನೋಲಜಿಸ್ ಬೆಳ್ತಂಗಡಿ, ಕಿಯೋನಿಕ್ಸ್ ಯುವ.ಕಾಂ ಬೆಳ್ತಂಗಡಿ ಸಂಸ್ಥೆಗಳ ಆಡಳಿತ ಮತ್ತು ಸಿಬಂದಿಗಳ ಪರವಾಗಿ ಸಮ್ಮಾನ ನಡೆಯಿತು.1610bteph1

ಚಿತ್ರದಲ್ಲಿ ಅಮೇರಿಕಾದ ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿ ಎಕ್ಸಿಕ್ಯೂಟಿವ್ ಗವರ್ನರ್ ಜನರಲ್ ಫ್ರೊ| ಡಾ| ರಾಲ್ ತೋಮಸ್, ಇಸಿಯು ಡೆಪ್ಯುಟಿ ವೈಸ್ ಚಾನ್ಸಿಲರ್ ಡಾ| ಜಾಫ್ರಿ ಕ್ಲರ್ಕ್ , ಶ್ರೀಲಂಕ ಯುನಿವರ್ಸಿಟಿಯ ಚಾನ್ಸಿಲರ್ ಡಾ|ಭೂಷಣ್, ಸಿಸಿಟಿವಿ ನಿರ್ದೇಶಕ ಡಾ| ಉದಯ ರಾಜ್, ಸಂಧ್ಯಾ ವಿ.ಪೈ,ಚಾರ್ಟಡ್ ಅಕೌಂಟೆಂಟ್ ಕೆ. ಗುರುಪ್ರಸಾದ್, ರಾಜಾ ಬಂಟ್ವಾಳ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *