ಮೂಡುಬಿದಿರೆ: ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಅವರ ಮನೆಗೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ನಿರಪರಾಧಿಗಳಿಗೆ ಶಿಕ್ಷೆಯಾದಲ್ಲಿ ಪ್ರಶಾಂತ್ ಪರವಾದ ಹೋರಾಟವನ್ನು ಕರಾವಳಿ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಮುನ್ನಡೆಸಲಿದ್ದೇವೆ. ಒಬ್ಬ ಹಿಂದೂ ಹೋರಾಟಗಾರ ಕೊಲೆಗೀಡಾಗುವುದು ದುರಂತದ ಸಂಗತಿ. ಈ ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರು ಕೊಲೆಗಡುಕರಿಗೆ ಬೆಂಗಾವಲಾಗಿರುವುದರಿಂದಲೇ ತನಿಖೆ ವಿಳಂಭವಾಗುತ್ತಿದೆ. ಮುಸ್ಲಿಮರ ಹತ್ಯೆಯಾದರೆ, ಅವರ ಅಂಗಡಿಗಳಿಗೆ ಬೆಂಕಿಬಿದ್ದರೆ ಬಹಳ ಬೇಗನೇ ಆ ಮನೆ ತಲುಪುವ ಕಾಂಗ್ರೆಸ್ ರಾಜಕಾರಣಿಗಳಿಗೆ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಬಗ್ಗೆ ಅಸಡ್ಡೆ ಏಕೆ?. ಸಚಿವ ಅಭಯಚಂದ್ರ ಜೈನ್ ಅವರನ್ನು ವಿಚಾರಣೆ ಮಾಡಿದರೆ ಪ್ರಶಾಂತ್ ಹತ್ಯೆ ಮಾಡಿದ ನೈಜ ಆರೋಪಿಗಳು ಸಿಗುತ್ತಾರೆ. ಜಿಲ್ಲೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮನಸ್ಸಿದರೇ ಪೊಲೀಸ್ ಅಧಿಕಾರಿಗಳೇ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವವರನ್ನು ತನಿಖೆಗೆ ಒಳಪಡಿಸಿ, ಆರೋಪಿಗಳನ್ನು ಬಂಧಿಸಿ
ರಾಜ್ಯ ಕಾರ್ಯದರ್ಶಿ ಪ್ರವೀಣ್ ವಾಲ್ಕೆ, ಮುಖಂಡರಾದ ಆನಂದ ಅಡ್ಯಾರ್, ಸುನೀಲ್ ಇರುವೈಲ್, ಶಮಿತ್ ರಾಜ್ ಧರೆಗುಡ್ಡೆ, ಸಂತೋಷ್, ರಂಜಿತ್ ಪೂಜಾರಿ, ಸುಧೀರ್ ಧರೆಗುಡ್ಡೆ, ಭಾಸ್ಕರ ಆಚಾರ್ಯ, ಶ್ರೀನಾಥ ಬೆಳುವಾಯಿ ಮೊದಲಾದವರಿದ್ದರು.
