ಮುಡುಬಿದರೆ: ಪುರುಷರ ವಿಭಾಗ 44ನೇ ಹಾಗೂ ಮಹಿಳೆಯರ ವಿಭಾಗದ 28ನೇ ಕರ್ನಾಟಕ ಸೀನಿಯರ್ ವೇಟ್‍ಲಿಫ್ಟಿಂಗ್ ಮತ್ತು ಪುರುಷ ಹಾಗೂ ಮಹಿಳಾ ವಿಭಾಗದ ಜೂನಿಯರ್ ವೇಟ್‍ಲಿಫ್ಟಂಗ್ ಅ.17 ಹಾಗೂ 18ರಂದು ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ವೇಟ್ ಲಿಫ್ಟೆರ್ಸ್ ಅಸೋಷಿಯೇಶನ್, ದ.ಕ ಜಿಲ್ಲಾ ವೇಟ್ ಲಿಫ್ಟೆರ್ಸ್ ಅಸೋಷಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕೂಟವನ್ನು ಅ.17ರಂದು ಅಂತಾರಾಷ್ಟ್ರೀಯ ಮಾಜಿ ವೇಟ್‍ಲಿಪ್ಟರ್ ಆರ್ತರ್ ಡಿ’ಸೋಜಾ ಉದ್ಘಾಟಿಸಲಿದ್ದಾರೆ. ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಕೆ.ಅಮರನಾಥ ಶೆಟ್ಟಿ, ಡಿ.ಚಂದ್ರಹಾಸ ರೈ ಉಪಸ್ಥಿತರಿರುವರು.
ಅ.18ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅರ್ಜುನ್ ಪ್ರಶಸ್ತಿ ಪುರಸ್ಕ್ರತ ಒಲಿಂಪಿಯನ್ ಸತೀಶ್ ರೈ ಬಹುಮಾನ ವಿತರಿಸಲಿದ್ದಾರೆ. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ವಕೀಲ ನಗರ ನಾರಾಯಣ ಶೆಣೈ ಮುಕ್ಯ ಅತಿಥಿಯಾಗಿರುವರು ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹಾಗೂ ದ.ಕ ಜಿಲ್ಲಾ ವೇಟ್ ಲಿಫ್ಟೆರ್ಸ್ ಅಸೋಷಿಯೇಶನ್ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
