ಮೂಡುಬಿದಿರೆ: ಕಳೆದ ಶುಕ್ರವಾರ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಅವರ ಹೂವಿನಂಗಡಿಯ ಹಿಂಬದಿಯಲ್ಲೇ ಇದ್ದ ಎಳೆನೀರು ಅಂಗಡಿಯ ವ್ಯಾಪಾರಿ ವಾಮನ ಪೂಜಾರಿ (68ವರ್ಷ) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
mbd_oct15_10 (6)

mbd_oct15_10 (1)

001
ವಾಮನ ಪೂಜಾರಿ ಗುರುವಾರ ಮಧ್ಯಾಹ್ನದ ನಂತರ ಅಂಗಡಿಯಲ್ಲಿ ಇರಲಿಲ್ಲ. ಇದರಿಂದ ಸಂಶಯಗೊಂಡ ಅವರ ಮನೆಯವರು, ಯಾರದರೂ ಅಪಹರಣ ಮಾಡಿರಬಹುದೆಂದು ಪೊಲೀಸರಿಗೆ ಮಾಹಿರಿ ನೀಡಿದರು. ಬಳಿಕ ಅವರ ಮಗಳ ಮನೆಯ ಬಳಿ ಹುಡುಕಾಡುವಾಗ, ಅವರಣದೊಳಗಿದ್ದ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಶುಕ್ರವಾರ ಪ್ರಶಾಂತ್ ಕೊಲೆಯಾದ ಸಂದರ್ಭ ವಾಮನ ಪೂಜಾರಿ ಘಟನೆಯನ್ನು ಕಣ್ಣಾರೆ ಕಂಡಿದ್ದರೆಂದು ತಿಳಿದುಬಂದಿದೆ. ನಂತರ ಈ ಘಟನೆಯ ಕುರಿತು ಸಾಕಷ್ಟು ಬಾರಿ ಪೊಲೀಸರು ಅವರಲ್ಲಿ ವಿಚಾರಣೆಗಾಗಿ ಮಾಹಿತಿ ಕಲೆ ಹಾಕುತ್ತಿದ್ದರೆಂದು ಹೇಳಲಾಗಿದೆ. ವಾಮನ ಪೂಜಾರಿಯವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ಲಭ್ಯವಾಗಿಲ್ಲ. ಪ್ರಶಾಂತ್ ಪೂಜಾರಿ ಹತ್ಯೆಯಾದ ಅದೇ ಸ್ಥಳದಲ್ಲಿ ವಾಮನ ಪೂಜಾರಿ ಹತ್ಯೆಯ ಸುದ್ದಿ ಹಬ್ಬಿದ ಕೂಡಲೇ ಸಾರ್ವಜನಿಕರು ಗುಂಪುಗೂಡಿದ್ದು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

By Suddi9

Leave a Reply

Your email address will not be published. Required fields are marked *