ಮೂಡುಬಿದಿರೆ: ಬಜರಂಗದಳದ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಅವರ ಹತ್ಯೆ ನಡೆದು 7 ದಿನಗಳಾದರೂ ಸಂಶಯಾಸ್ಪದ ವ್ಯಕ್ತಿಗಳನ್ನು ತನಿಖೆ ನಡೆಸಿಲ್ಲ ಅಲ್ಲದೆ ಇನ್ನೂ ಕೂಡಾ ಆರೋಪಿಗಳನ್ನು ಬಂಧಿಸಿಲ್ಲವೆಂದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಆರೋಪಿಸಿ ಅ.19ರೊಳಗೆ ಆರೋಪಿಗಳನ್ನು ಸೆರೆ ಹಿಡಿಯದಿದ್ದರೆ 20ರಂದು ಇಲಾಖೆಗಳ ವಿರುದ್ಧ ತೀವೃವಾದ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಅವರು ಮೂಡುಬಿದಿರೆಯ ಪೇಟೆಯಲ್ಲಿ ದುಷ್ಕಮರ್ಿಗಳಿಂದ ಹತ್ಯೆಯಾಗಿರುವ ಬಿರಾವಿನ ಪ್ರಶಾಂತ್ ಪೂಜಾರಿ ಅವರ ಮನೆಗೆ ಬುಧವಾರ ರಾತ್ರಿ ಭೇಟಿ ಹೆತ್ತವರಿಗೆ ಸಾಂತ್ವಾನ ಹೇಳಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ ಒಬ್ಬ ಯುವಕನ ಕೊಲೆ ನಡೆದು ಇಷ್ಟು ದಿನವಾದರೂ ಇನ್ನು ಕೂಡಾ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಮತ್ತು ಸಚಿವ, ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಅವರು ಮೃತರ ಮನೆಗೆ ಭೇಟಿ ನೀಡದಿರುವುದು ಮಾನವೀಯತೆ ಇಲ್ಲದಂತ್ತಾಗಿದೆ. ಅಲ್ಲದೆ ಪೊಲೀಸ್ ಮೇಲಾಧಿಕಾರಿಗಳು ಕೂಡಾ ಸರಿಯಾಗಿ ತನಿಖೆ ನಡೆಸದೆ ಸರಕಾರದ ನಿದರ್ೇಶನದಂತೆ ಪಕ್ಷಪಾತ ಧೋರಣೆ ಮಾಡುತ್ತಿರುವ ರೀತಿ ನನ್ನನ್ನು ಚಕಿತಗೊಳಿಸಿದೆ ಎಂದರು.
ಈ ಹಿಂದೆ ಹಡೇಲಿನಲ್ಲಿ ಇಬ್ಬರು ಹಿಂದೂ ಯುವಕರ ಮೇಲೆ ಹಂಡೇಲು ಬಳಿ ಹತ್ಯೆಗೆ ಯತ್ನ ನಡೆದಿದೆಯಾದರೂ ಆ ಅಪರಾಧಿಗಳನ್ನು ಹಿಡಿದಿಲ್ಲ. ಸರಕಾರವು ಸಂಪೂರ್ಣವಾಗಿ ಹಿಂದುಗಳ ವಿರೋಧಿಯಾಗಿದ್ದು ದೇಶ ದ್ರೋಹಿ ಅಲ್ಪಸಂಖ್ಯಾತರ ಪರವಾಗಿದೆ. ಪೊಲೀಸ್ ಇಲಾಖೆಗಳು ರಾಜಕೀಯ ಒತ್ತಡಕ್ಕೆ ಬಲಿಯಾಗಿದೆ ಎಂದು ಹೇಳಿದ ಅವರು ಅಕ್ರಮ ಗೋ ಸಾಗಾಟ ನಡೆಸುವಾಗ ತಡೆಯುವ ಯುವಕರ ಮೇಲೆ ಕೇಸು ಹಾಕುವ ಪೊಲೀಸರು ಇದೀಗ ಭೀಕರ ಅವಘಡ ಸಂಭವಿಸಿದಾಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಬಾಕ್ಸ್
ಗೋವುಗಳ ಕಳ್ಳತನ, ಅಕ್ರಮ ಗೋವುಗಳ ಸಾಗಾಟವನ್ನು ತಡೆಗಟ್ಟಲು ಕಾನೂನು ಕ್ರಮ ಇದೆ ಆದರೆ ಅದನ್ನು ಯಾರೂ ಅನುಸರಿಸುತ್ತಿಲ್ಲ ಎಂದು ಪ್ರಹ್ಲಾದ ಜೋಶಿ ತಿಳಿಸಿದರು.
ಚಿತ್ರ : 15 ಮೂಡ್ ಪ್ರಹ್ಲಾದ ಜೋಶಿ ಭೇ

