ಬಂಟ್ವಾಳ: ಬಂಟ್ವಾಳ ತಾಲೂಕು ಯುವ ಜಯಕರ್ನಾಟಕದ ತಾಲೂಕು ಸಮಿತಿಯನ್ನು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಮಿತಾಶ್ ಎಂ, ಕಾರ್ಯಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್, ಸಂಘಟನ ಕಾರ್ಯದರ್ಶಿಯಾಗಿ ಶುಭಕರ್ ಶೆಟ್ಟಿ, ಉಪಾಧ್ಯಕ್ಷರಾಗಿ ಉಮೇಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಯುವ ಜಯಕರ್ನಾಟಕದ ಜಿಲ್ಲಾಧ್ಯಕ್ಷ ಸಹಜ್ ಜೆ.ರೈ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪುತ್ತೂರು ತಾಲೂಕು ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾದ ಜುಬೇರ್ ಪಿ.ಕೆ, ಪುತ್ತೂರು ನಗರಾಧ್ಯಕ್ಷ ಶರತ್ ಆಳ್ವ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಮರ್ಥ ಭಂಡಾರಿ, ರಾಮ್ದಾಸ್ ಶೆಟ್ಟಿ ವಿಟ್ಲ, ಸಂತೋಷ್ ಉಪಸ್ಥಿತರಿದ್ದರು.

