ಬಂಟ್ವಾಳ : ಕಲೆಗಳನ್ನು ಆರಾದಿಸುವುದು ಪ್ರೋತ್ಸಾಹಿಸುವುದು ನಮ್ಮ ಧರ್ಮ. ಸರಸ್ವತಿಯನ್ನು ಆರಾದಿಸುವವರಿಗೆ ದೇವರ ಅನುಗ್ರಹ ಆಶೀರ್ವಾದ ಖಂಡಿತಾ ಇದೆ . ಚಿಣ್ಣರ ಲೋಕದ ಮಕ್ಕಳ ಪ್ರತಿಭೆ ದೀಪದಂತೆ ಬೆಳಗಲಿ ಎಂದು ಅನ್ನಪೂರ್ಣೆಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್ ನುಡಿದರು.
ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಇದರ ವತಿಯಿಂದ ಅನ್ನಪೂರ್ಣೇಶ್ವರಿ ಪೋಲೀಸ್ ಲೈನ್ ಮೈದಾನದಲ್ಲಿ ಜರಗಿದ ‘ ಚಿಣ್ಣರ ಚಿಲಿಪಿಲಿ-2015’ ಕಾರ್ಯಕ್ರಮವನ್ನು ಬಿ.ದಾಮೋದರ ರಾವ್ ಉದ್ಘಾಟಿಸಿದರು.
ಮಕ್ಕಳ ಪ್ರತಿಭೆ ಗಳನ್ನು ಗುರುತಿಸುವ ಕೆಲಸ ಟ್ರಸ್ಟ್ ಮೂಲಕ ನಡೆಸಿಕೊಂಡು ಬಂದಿರುವುದು ಒಳ್ಳೆಯ ಕೆಲಸ. ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕೊಡುವುದೇ ಹೆತ್ತವರ ಧರ್ಮ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಪೂಜಾರಿ ನುಡಿದರು.
ಮಣ್ಣಿನ ಸತ್ವ ಯಕ್ಷಗಾನ ಕಲೆಯಲ್ಲಿ ಇದೆ. ಯಕ್ಷಗಾನ ಕಲೆಯಿಂದ ದುರಾಭ್ಯಾಸಗಳು ನಾಶವಾಗಿ ವ್ಯಕ್ತಿಯೊಬ್ಬ ನಾಡಿನ ಶಕ್ತಿಯಾಗಬಲ್ಲ ಎಂದು ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ನುಡಿದರು.ತಾಲೂಕು ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಹಾಗೂ ಚಿಣ್ಣರ ಚಿಲಿಪಿಲಿ ಗೌರವಾಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಚಿಣ್ಣರ ಅಧ್ಯಕ್ಷೆ ವಂಶ ಎನ್ ಭಂಡಾರಿ , ತಾಲೂಕು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಪ್ರಕಾಶ್ ಬಿ ಶೆಟ್ಟಿ ಶ್ರೀ ಶೈಲ, ತಾಲೂಕು ಸಂಯೋಜಕ ಮಂಜು ವಿಟ್ಲ , ನ್ಯಾಯವಾದಿ ಜಯರಾಮ ರೈ, ನಿವೃತ್ತ ಪೋಲೀಸ್ ಅಧಿಕಾರಿ ಆನಂದ್ ಉಪಸ್ಥಿತರಿದ್ದರು.
ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ ಪ್ರಸ್ತಾವನೆಗೈದರು. ಅಧ್ಯಕ್ಷ ಸುಭಾಸ್ ಚಂದ್ರ ಜೈನ್ ಸ್ವಾಗತಿಸಿದರು. ಶ್ರೀನಿವಾಸ್ ಭಂಡಾರಿ ವಂದಿಸಿ ಲಲಿತಾ ಮಳಲಿ ಕಾರ್ಯಕ್ರಮ ನಿರೂಪಿಸಿದರು.

