ಎಡಪದವು: ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್(ರಿ) ಬಡಗಎಡಪದವು ಮಿಜಾರು ಮತ್ತು ಹಿಂದು ಸೇವಾ ಪ್ರತಿಷ್ಠಾನ ಇದರ ವತಿಯಿಂದ ಭೂತನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಐದನೇ ವರ್ಷದ 10ನೇ ಇಂಚರ ಮಕ್ಕಳ ಶರಧೃತ್ ಶಿಬಿರ ಉಧ್ಘಾಟನೆ ಅ.13 ಮಂಗಳವಾರ ಸಂಜೆ ನಡೆಯಿತು. ಈ ಶಿಬಿರ ಅ.18ರ ತನಕ ನಡೆಯಲಿದೆ.
ಈ ಶಿಬಿರವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯನಂದ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಭಾರತ ದೇಶದ ನೈತಿಕ ಮಟ್ಟ ಕ್ಷೀಣವಾಗುತ್ತಾ ಬಂದಿದೆ ಈ ದೇಶದಲ್ಲಿ ಅಧರ್ಮ, ಅನ್ಯಾಯ, ಅತ್ಯಾಚಾರ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಇವೆಲ್ಲ ಆಗುತ್ತಿದೆ ಯಾಕೆಂದರೆ ನಾವು ನಮ್ಮ ಮಕ್ಕಳಿಗೆ ಸಂಸ್ಕಾರ ಕೊಟ್ಟಿಲ್ಲ ಇದಕ್ಕೆ ಕಾರಣ ಅವರ ಹೆತ್ತವರು ಮತ್ತು ವಿದ್ಯೆ ಕಲಿಸಿ ಕೊಟ್ಟ ಗುರುಗಳು ನಮ್ಮ ಧರ್ಮಗಳಲ್ಲಿ, ಶಾಸ್ತ್ರಗಳಲ್ಲಿ ತಾಯಿಯ ಪಾತ್ರ ತುಂಬಾ ಮುಖ್ಯ. ಭಾರತ ದೇಶದಲ್ಲಿ ಹೆಣ್ಣಿನ ಸ್ಥಾನಮಾನ ಯಾವ ರೀತಿಯಲ್ಲಿ ಇಂದು ಇದೆ, ನಮ್ಮ ಮಕ್ಕಳಿಗೆ ಸಂಸ್ಕಾರ ಸಂಸ್ಕ್ರತಿ ತುಂಬಾ ಕಡಿಮೆಯಾಗಿದೆ ಅದಕ್ಕಾಗಿ ಇಂತಹ ಶಿಬಿರಗಳು ಹಳ್ಳಿಹಳ್ಳಿಗಳಲ್ಲಿ ನಡೆಯಬೇಕು. ಮಕ್ಕಳನ್ನು ಜಾಗೃತಗೊಳಿಸಬೇಕು. ನಮ್ಮ ಸನಾತನ ಧರ್ಮ ನಮ್ಮ ಸಂಸ್ಕಾರ ಸಂಸ್ಕ್ರತಿ ಇದರ ವಿಷಯ ಮಕ್ಕಳಿಗೆ ಮನದಟ್ಟು ಮಾಡಬೇಕು. ಹಿಂದೆ ಮೆಕಾಲೆ ನಮ್ಮ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಪರಿಚಯ ಮಾಡಿದ ಇದರಿಂದ ನಮ್ಮ ಎಲ್ಲಾ ಸಂಸ್ಕಾರ ಸಂಸ್ಕ್ರತಿ ಧರ್ಮ ಎಲ್ಲವು ಅಡಿಮೇಲಾಯಿತು. ಅದಕ್ಕಾಗಿ ಈಗ ನಮ್ಮ ಮಕ್ಕಳು ಈ ದುಸ್ಥಿತಿಗೆ ಬಂದಿದ್ದಾರೆ. ಹಿಂದೆ ಗುರುಕುಲ ವಿದ್ಯಾಭ್ಯಾಸದಲ್ಲಿ ಗುರುಶಿಷ್ಯರ ಭಾಂದವ್ಯ, ಗೌರವ ಎಷ್ಟು ಇತ್ತು ಆದರೆ ಈಗ ಅದು ಇಲ್ಲ. ಈ ಶಿಬಿರದಲ್ಲಿ ಒಳ್ಲೇಯ ವಿಷಯಗಳು ಇದೆ ಇದನ್ನು ನಿವು ಜೀವನದಲ್ಲಿ ಆಳವಡಿಸುವ ಮೂಲಕ ವಿವೇಕಾನಂದರ ಆದರ್ಶವನ್ನು ಪಾಲಿಸಬೇಕು. ಆದ್ದರಿಂದ ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಸ್ವಾಮೀ ವಿವೇಕಾನಂದರಾಗಬೇಕು. ಧರ್ಮಯುಕ್ತ ರಾಜನೀತಿಯಲ್ಲಿ ನೀವು ಬೆಳೆಯಬೇಕು ಎಂದರು.
ಮುಖ್ಯ ಅಥಿತಿಯಾಗಿ ಕೇಶವ ಶಿಶು ಮಂದಿರ ಕಿನ್ಯಾ ಇದರ ಅಧ್ಯಕ್ಷ ನಾರಾಯಣ್ ಕಜೆ ಪ್ರಾಸ್ತಾವಿಕವಾಗಿ ಮಾತಾನಾಡಿ ಮೆಕಲೆ ಶಿಕ್ಷಣ ಪರಿಣಾಮದಿಂದ ಸಂಸ್ಕ್ರತಿ ಧರ್ಮ ಪರಂಪರೆಯನ್ನು ನಾವು ತಿಳಿಯುದಕ್ಕೆ ಅಸಾಧ್ಯವಾಗಿದೆ. ಹಿಂದೆ ಗುರುಕುಲ ಶಿಕ್ಷಣ ಇತ್ತು. ಈ ಗುರುಕುಲ ಶಿಕ್ಷಣದಲ್ಲಿ ಒಬ್ಬ ಮನುಷ್ಯ ಈ ದೇಶದಲ್ಲಿ ಮನುಷ್ಯನಾಗಿ ಹೇಗೆ ಬೆಳೆಯಬೇಕು ಅವನ ಕರ್ತವ್ಯ ಹೇಗೆ, ಅವನ ಹೊಣೆಗಾರಿಕೆ ಹೇಗೆ, ಅವನಿಗೆ ಧರ್ಮ, ಸಂಸ್ಕಾರ ಸಂಸ್ಕøತಿ ಇವೆಲ್ಲವು ಗುರುಕುಲ ಶಿಕ್ಷಣದಿಂದ ದೊರೆಯುತ್ತಿತ್ತು. ಈ ಮೆಕಾಲೆ ಶಿಕ್ಷಣ ಪರಿಣಾಮದಿಂದ ಇವೆಲ್ಲವನ್ನು ತಿರುಚಿ ನಮಗೆ ಆಂಗ್ಲಮಾಧ್ಯಮದಿಂದ ವ್ಯಾಮೋಹವಾಗಿ ನಮ್ಮ ಸಂಸ್ಕ್ರತಿಯನ್ನು ಪಡೆಯುದಕ್ಕೆ ನಾವು ವಂಚಿತರಾಗಿದ್ದೇವೆ. ಅದ್ದರಿಂದ ಇಂತಹ ಶಿಬಿರಗಳು ಈಗ ನಮ್ಮ ಮಕ್ಕಳಿಗೆ ಅನಿವಾರ್ಯವಾಗಿದೆ. ಭಾರತ ದೇಶದಲ್ಲಿ ತಾಯಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ಒಬ್ಬ ಮಗುವಿನ ಹಿಂದೆ ಇದ್ದಾರೆ. ಆ ತಾಯಿಗೆ ಸರಿಯಾದ ಸಂಸ್ಕಾರ ಇದ್ದಾಗ ಮಾತ್ರ ತಾಯಿ ಮಗುವನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಬಹುದು. ಅದೇ ರೀತಿ ವಿವೇಕಾನಂದರ ಭುವನೇಶ್ವರೀ ಹಾಗೂ ಶಿವಾಜಿ ಮಹಾರಾಜರ ಹಿಂದೆ ಜಿಜಾ ಬಾಯಿ ಇದ್ದರು ಅದ್ದರಿಂದ ಅವರು ವೀರ ಪುರುಷರಾಗಿದ್ದಾರೆ. ಅದ್ದರಿಂದ ತಾಯಂದಿರು ತಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಮಕ್ಕಳು ವಿವೇಕಾನಂದ ಸ್ವಾಮೀಜಿ ಹಾಗೂ ಶಿವಾಜಿ ಹಾಗೂ ದೇಶಕ್ಕೆ ಕಿರ್ತೀ ತರುತ್ತಾರೆ ಎಂದರು.
ಶಿಬಿರದಲ್ಲಿ ಸ್ಥಳೀಯ 79 ಮಕ್ಕಳು ಪಾಲ್ಗೊಂಡಿದ್ದು, ಈ ಶಿಬಿರದಲ್ಲಿ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ಬೇರ ಬೇರೆ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಭಾರತೀಯ ಸಂಸ್ಕ್ರತ ಕಲೆ, ಪುರಾಣ ಮತ್ತಿತ್ತರ ವಿಚಾರಗಳ ಬಗ್ಗೆಗೆ ತಿಳುವಳಿಕೆ ಮೂಡಿಸುವ ಜೊತೆ ವ್ಯಕ್ತಿತ್ವ ವಿಕಾಸನವು ಈ ಶಿಬಿರದ ಉದ್ದೇಶವಾಗಿದೆ. 6ನೇ ತರಗತಿಯಿಂದ 9ನೇ ತರಗತಿಯ ಮಕ್ಕಳಿಗೆ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಶಿಬಿರ ಉಚಿತ ಪ್ರವೇಶವಾಗಿದ್ದು ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 5.30ರ ತನಕ ಶಿಬಿರಗಳಿಗೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.
ಶ್ಲೋಕ, ಸರ್ವಜ್ಞನ ವಚನ, ಮಂಕುತಿಮ್ಮನ ಕಗ್ಗ, ಕಬೀರ ದೋಹೆ, ಅಮೃತವಚನ, ಅಮೃತಬಿಂದು, ದೇಶಭಕ್ತಿ ಗೀತೆ, ಭಗವದ್ಗಿತೆಯ ಕಂಠಪಾಠ ಅಲ್ಲದೆ ಭಾರತದ ಸಾಧನೆಗಳು, ಪಂಚಾಂಗ, ಸಂಸ್ಕøತ ಸಂಭಾಷಣೆ, ಯೋಗಸನಾ,ಭಜನೆ ಮತ್ತು ಕುಣಿತ ಭಜನೆ, ಮಾತೃಬೋಜನ, ದೀಪಬೋಜನ. ಬೆಳಂದಿಗಳ ಊಟ, ಪ್ರವಾಸ, ಹಿರಿಯರಿಂದ ಗೌರವ ಇತ್ಯಾದಿಗಳ ಬಗ್ಗೆಗೆ ಹಿರಿಯರಿಂದ ಮಾರ್ಗದರ್ಶನ, ಧ್ರುವ ನಚಿಕೇತ, ಪ್ರಹ್ಲಾದ , ಸಾವರ್ಕರ್, ಭಗಿನಿ ನಿವೇದಿತ ಮತ್ತಿತ್ತರ ಮಹಾಪುರುಷರ ಕಥೆಗಳು, ಪಂಚತಂತ್ರ, ರಾಮಯಾಣ, ಮಹಾಭಾರತದ ಪರಿಚಯ, ಚಿತ್ರಕಲೆ, ಕರಕುಶಲ, ಶರೀರ, ಮನಸ್ಸು ಬುದ್ದಿಬೆಳವಣಿಗೆಗೆ ಪೂರಕವಾದ ಕೆಲವು ಆಟಗಳು ಹೀಗೆ ಎಲ್ಲಾ ವಿಧದಲ್ಲಿಯೂ ಮಕ್ಕಳ ಸರ್ವತೋಮುಕ ಬೆಳಣಿಗೆಗೆ ಪೂಕರವಾದ ಚಟುವಟಿಕೆಗಳನ್ನು ಶಿಬಿರದಲ್ಲಿ ನಡೆಸಲಾಗಿವು ಎಂದು ಶಿಬಿರದ ಆಡಳಿತ ಮಂಡಳಿ ತಿಳಿಸಿದೆ.
ಸಭೆಯಲ್ಲಿ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್, ಆಡಳಿತ ಮೋಕ್ತೇಸರಾದ ಪ್ರೇಮಲತಾ ವಿ ಶೆಟ್ಟಿ, ಗುಲಾಬಿ ಶೆಟ್ಟಿ ಮಿಜಾರು ಗುತ್ತು, ಕಾಂತಪ್ಪ ಶೆಟ್ಟಿ, ಮತ್ತು ಮಕ್ಕಳ ಹೆತ್ತವರು ಹಾಗೂ ಹಿಂದೂ ಸೇವಾ ಪ್ರತಿಷ್ಠಾನದ ಸೇವಾ ಭಗೀನಿಯರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದರು. ಕಾಂತಪ್ಪ ಶೆಟ್ಟಿ ಸ್ವಾಗತಿಸಿ, ಕುಸುಮಾಕರ್ ನಿರೂಪಿಸಿ ವಂದಿಸಿದರು.





