ಮೂಡುಬಿದಿರೆ: ಇಲ್ಲಿನ ಬಸ್ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಸರಗಳ್ಳನೊಬ್ಬ ಮಗುವಿನ ಸರ ಕದ್ದು, ಓಡಿ ಹೋಗಲು ಪ್ರಯತ್ನಿಸುತ್ತಿರುವಾಗ ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮೂಡುಬಿದಿರೆ ಬಸ್‍ನಿಲ್ದಾಣದಲ್ಲಿ ಕಾರ್ಕಳಕ್ಕೆ ಹೋಗುವ ಬಸ್‍ಗಳು ನಿಲ್ಲುವ ಸ್ಥಳದಲ್ಲಿ ಮಹಿಳೆಯೊಬ್ಬರು ಮಗುವಿನ ಜೊತೆ ನಿಂತಿದ್ದಾಗ ಸರಗಳ್ಳನೊಬ್ಬ ಮಗುವಿನ ಸರ ಎಳೆದು, ಓಡಲು ಯತ್ನಿಸಿದ. ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರೊಗೊಪ್ಪಿಸಿದ್ದಾರೆ.
