ಬಂಟ್ವಾಳ: ಹಿಂದೂ ಸುರಕ್ಷೆ ವಿಫಲತೆಯ ಬಗ್ಗೆ ಸಂಬಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಬಂಟ್ವಾಳ ತಾಲೂಕು ಸಮಿತಿ ಮಂಗಳವಾರ ತಾಲೂಕು ತಹಶೀಲ್ದಾರ್ ಮೂಲಕ ಗೃಹ ಇಲಾಖೆಗೆ ಮನವಿ ಸಲ್ಲಿಸಿದೆ.
BTW_OCT13_9 (1)
ಶಾಂತಿ ಪ್ರಿಯರ ನಾಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಹಾಡು ಹಗಲೇ ರಾಜಾರೋಷವಾಗಿ ಬರ್ಬರ ಹತ್ಯೆಗಳು ನಡೆಯುತ್ತಿದೆ. ಗೋ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ, ಗೋಹತ್ಯೆ ವಿರುದ್ದದ ಕೂಗು ಅರಣ್ಯ ರೋಧನವಾಗುತ್ತಿದೆ. ಮಾಂಗಲ್ಯ ಅಪಹರಣ ಎಗ್ಗಿಲ್ಲದೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಮೂಡಬಿದಿರೆಯಲ್ಲಿ ಪ್ರಶಾಂತ ಎಂಬ ಯುವಕನ ಹತ್ಯೆ ನಡೆದಿದ್ದು ಇನ್ನೂ ಅಪರಾಧಿಗಳ ಪತ್ತೆ ಸಾಧ್ಯವಾಗಿಲ್ಲ. ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಹಿಂದೇಟು ಹಾಕುವ ಪೊಲೀಸ್ ಇಲಾಖೆಯಲ್ಲಿ ವಿಶ್ವಾಸ ಕುಂದುತ್ತಿದೆ. ಅಪರಾಧಿಗಳನ್ನು ತಕ್ಷಣ ಮಟ್ಟಹಾಕಲು ವಿಫಲರಾದರೆ ನಾವೇ ಕಾನೂನು ಚಳುವಳಿ ಮೂಲಕ ಇಲಾಖೆಯ ಕಾರ್ಯವೈಫಲ್ಯವನ್ನು ಪ್ರಶ್ನಿಸುವ ಅನಿವಾರ್ಯತೆ ಇದೆ. ಸಮಸ್ತ ಹಿಂದೂ ಸಮಾಜದ ರಕ್ಷಣೆಗಾಗಿ, ಮಾನಬಿಂದುಗಳ ಸುರಕ್ಷತೆಗಾಗಿ ಬೀದಿಗಳಿಯುವುದಕ್ಕೆ ಮೊದಲೇ ಅಪರಾಧಿಗಳನ್ನು ಮತ್ತು ಅಪರಾಧಕ್ಕೆ ಕುಮ್ಮಕ್ಕು ನೀಡಿದವರನ್ನು ಬಂಧಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್‍ನ ಪ್ರಮುಖರಾದ ಸರಪಾಡಿ ಅಶೋಕ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಸುರೇಶ್ ಬೆಂಜನ ಪದವು ಬಜರಂಗದಳದ ಪ್ರಮುಖರಾದ ಗುರುರಾಜ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು, ಭುವಿತ್ ಶೆಟ್ಟಿ, ಕೃಷ್ಣಪ್ಪ ಕಲ್ಲಡ್ಕ, ಮಿಥುನ್ ಕಲ್ಲಡ್ಕ, ದಕ್ಷನ್ ಕಂದೂರು, ಮನೋಜ್, ಯತೀಶ್ ಮೆಲ್ಕಾರ್, ಪ್ರದೀಪ್ ಮೆಲ್ಕಾರ್, ರೋಹಿತ್ ಪಣೋಲಿಬೈಲು, ವಿವೇಕ್‍ರಾಜ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *